ಸುಮಾರು ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಹಲವು ಸಂಶೋಧನೆಗಳನ್ನ ಮಾಡಿದ್ದಾರೆ. ಪ್ರತಿದಿನ ಏನಾದರೊಂದು ಕಂಡುಹಿಡಿಯುತ್ತಾ ಜೀವಿಸಿದ್ದಾರೆ. ಸದ್ಯ ಮಾರ್ಚ್ 18ರಂದು ಭೂಮಿಗೆ ಬಂದ ಸುನೀತಾ ವಿಲಿಯಮ್ಸ್ ಕೊಂಚ ಸುಧಾರಿಸಿಕೊಂಡು ಮಾಧ್ಯಮದವರ ಮುಂದೆ ಬಂದಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಅದರಲ್ಲೂ ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ, ಭಾರತ ಎನ್ನುವುದೇ ಒಂದು ಅದ್ಭುತ. ಬಾಹ್ಯಾಕಾಶದಿಂದ ಹಿಮಾಲಯ ಪರ್ವತಗಳನ್ನು ನೋಡುವುದೇ ನಮಗೆ ಎಲ್ಲಿಲ್ಲದ ಖುಷಿ. ಬಾಹ್ಯಾಕಾಶಕ್ಕೆ ಹೋಗುವಾಗ ಹಾಗೂ ಅಲ್ಲಿಂದ ಬರುವಾಗ ಹಿಮಾಲಯ ಪರ್ವತದ ಚಿತ್ರಗಳನ್ನು ತೆಗೆದುಕೊಂಡಿದ್ದೇವೆ. ನಾವೂ ಇರುವ ಕಕ್ಷೆಯಿಂದ ಅತ್ಯಂತ ರಂಗು ರಂಗಾಗಿ ಭಾರತ ಗೋಚರಿಸುತ್ತದೆ. ಅದರಲ್ಲೂ ಪ್ರಮುಖವಾಗಿ ಗುಜರಾತ್ ಹಾಗೂ ಮುಂಬೈನ ಭೂಮಿಗಳು ಅದ್ಭುತವಾಗಿ ಕಾಣಿಸುತ್ತವೆ. ದೊಡ್ಡ ದೊಡ್ಡ ಸಿಟಿಗಳು ಪುಟ್ಟ ಪುಟ್ಟ ಹಳ್ಳಿಗಳಂತೆ ಅಲ್ಲಿ ನಮಗೆ ಗೋಚರಿಸುತ್ತವೆ.

ಭಾರತದ ಬಾಹ್ಯಾಕಾಶ ಸಂಸ್ಥೆಗಳು ಬೆಳೆಯುತ್ತಿದ್ದ ಪರಿಯನ್ನು, ಅದರ ಪಾತ್ರವನ್ನು ಸುನೀತಾ ವಿಲಿಯಮ್ಸ್ ಹಾಡಿ ಹೊಗಳಿದ್ದಾರೆ. ನನ್ನ ತಂದೆಯ ನೆಲವಾದ ಭಾರತದ ಗಗನಯಾತ್ರಿಗಳು ಕೂಡ ಆಕ್ಸಿಯಮ್ ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ಹೋಗುತ್ತಿರುವುದು ನಿಜಕ್ಕೂ ಖುಷಿ ಇದೆ. ಭಾರತ ಒಂದು ಶ್ರೇಷ್ಠ ದೇಶ ಮತ್ತು ಅತ್ಯದ್ಭುತ ಪ್ರಜಾಪ್ರಭುತ್ವ ಹೊಂದಿರುವ ದೇಶ ಎಂದು ಭಾರತವನ್ನು ಹಾಡಿ ಹೊಗಳಿದ್ದಾರೆ. ಅಮೆರಿಕಾ ಮೂಲದ ಸುನೀತಾ ವಿಲಿಯಮ್ಸ್ ಭಾರತ ದೇಶದ ಬಗ್ಗೆ ಇಷ್ಟೊಂದು ಗೌರವ, ಭಕ್ತಿ, ಭಾವ ಇಟ್ಟುಕೊಂಡಿರುವ ನಮ್ಮ ಭಾರತೀಯರಿಗೆ ಹೆಮ್ಮೆ ತರಿಸಿದ ವಿಚಾರವಾಗಿದೆ. ಸುಮಾರು ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿದ್ದು ಸಾಧನೆ ಮಾಡಿ ಬಂದ ಸುನೀತಾ ವಿಲಿಯಮ್ಸ್ ಗೆ ಎಲ್ಲರು ಶುಭಕೋರಿದ್ದಾರೆ.

