ಕೋಲಾರದ ಹಳ್ಳಿ ಹುಡುಗ.. ರಾಯಚೂರಿನ ವೈದ್ಯೆ UPSC ಪಾಸ್ ಮಾಡಿದ್ದು ಹೇಗೆ..?

1 Min Read

ಬೆಂಗಳೂರು: 2026ನೇ ಸಾಲಿನ ಯುಪಿಎಸ್ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಪ್ರತಿಭಾವಂತ ಮಕ್ಕಳು ಪಾಸ್ ಆಗಿದ್ದಾರೆ. ರಾಜ್ಯದಿಂದ ಸುಮಾರು 22ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಕೋಲಾರದ ರೈತನ ಮಗನೊಬ್ಬ ರ್ಯಾಂಕ್ ಬಂದಿರೋದು ರಾಜ್ಯಕ್ಕೆ ಹೆಮ್ಮೆ ತಂದಿದೆ. ಕೋಲಾರ ಜಿಲ್ಲೆಯ ಅಣ್ಣಿನಹಳ್ಳಿಯ ರೈತನ ಮಗ ಸಾಗರ್ 641ನೇ ಅಖಿಲ ಭಾರತ ರ್ಯಾಂಕ್ ಪಡರದು ಗಮನ ಸೆಳೆದಿದ್ದಾರೆ.

ಈ ಬಗ್ಗೆ ಸಾಗರ್ ಮಾತನ್ನಾಡಿದ್ದಾರೆ, ತುಂಬಾನೇ ಖುಷಿಯಾಗಿದೆ, ಸ್ವಲ್ಪ ರಿಲ್ಯಾಕ್ಸ್ ಆಗಿದ್ದೇನೆ. ನನ್ನ ಪೋಷಕರು ಏನು ಓದಿಲ್ಲ. ಹೀಗಾಗಿ ತುಂಬಾನೇ ಖುಷಿಯಾಗಿದ್ದಾರೆ. ಯುಪಿಎಸ್ಸಿ ಪರೀಕ್ಷೆಗೆ ನಾನು ಮುಂಚೆ ಇದ್ದಂತ ಕೆಲಸಕ್ಕೆ ರಜೆ ತೆಗೆದುಕೊಂಡು ಬಂದು ಪ್ರಿಪೇರ್ ಆಗಿದ್ದೆ. ಏಳು ವರ್ಷದಿಂದ ಓದುತ್ತಿದ್ದೆ. ಯಾರು ಕಷ್ಟಪಟ್ಟು ಓದುತ್ತಿದ್ದೀರಿ, ನಿಮ್ಮ ಗುರಿಯನ್ನ ತಲುಪಬೇಕು ಅಂದ್ರೆ ಅದಕ್ಕೆ ಇನ್ನಷ್ಟು ಶ್ರಮ ಹಾಕಲೇಬೇಕು. ತಾಳ್ಮೆಯಿ ಬಹಳ ಮುಖ್ಯವಾಗಿ ಬೇಕಾಗುತ್ತೆ ಎಂಬ ಮಾತನ್ನ ಹೇಳಿದ್ದಾರೆ.

ಯಾದಗಿರಿಯ ಜಿಲ್ಲೆಯ ಡಾ.ನಿವೇದಿತಾ ಕೂಎ 469ನೇ ರ್ಯಾಂಕ್ ಪಡೆದಿದ್ದಾರೆ. ಈ ಬಗ್ಗೆ ಅವರ ಶ್ರಮದ ಬಗ್ಗೆ ಮಾತನ್ನಾಡಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕೂಡ ಯುಪಿಎಸ್ಸಿ ಪಾಸ್ ಆಗಬೇಕು ಅಂತ ಇತ್ತು. ಆ ಕನಸು ನನಸಾಗಿದೆ. ಬರೀ ನನ್ನ ಕನಸ್ಸಲ್ಲ ನಮ್ಮ ಕುಟುಂಬದ ಕನಸ್ಸೆ ಆಗಿತ್ತು. ಡಾಕ್ಟರ್ ಆಗಿ ಯಾದಗಿರಿಯಲ್ಲಿ ಕೆಲಸ ಮಾಡಿದ್ದೆ. ಮೊದಲಿನಿಂದಲೂ ಅದೇ ಕನಸಿದ್ದರಿಂದ ಪಾಸ್ ಮಾಡಿಕೊಂಡೆ. 10 ನೇ ಕ್ಲಾಸ್ ನಲ್ಲಿ ಡಿಸ್ಟಿಕ್ ಟಾಪರ್ ಆಗಿದ್ದೆ. ನಮ್ಮ ಸ್ಕೂಲ್ ಹೆಚ್ಎಂ ಅಂದು ಡಿಸ್ಟಿಕ್ ಕಲೆಕ್ಟರ್ ಆಗ್ಬೇಕು ನೀನು ಅಂದಿದ್ರು. ಅದೇ ಸ್ಪೂರ್ತಿ ಆಯ್ತು ಎಂದಿದ್ದಾರೆ.

Share This Article