Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಮನೆಗಳ್ಳತನ : ಮೊಳಕಾಲ್ಮೂರು ಪೊಲೀಸರಿಂದ ಇಬ್ಬರ ಬಂಧನ, ಚಿನ್ನಾಭರಣ ವಶ

---Advertisement---

ಸುದ್ದಿಒನ್, ಮೊಳಕಾಲ್ಮೂರು, ಸೆಪ್ಟೆಂಬರ್. 28 : ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮೂರು ಹಗಲು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಕಳುವಾಗಿದ್ದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ನಾಗರಾಜ ಮತ್ತು ರಾಜಣ್ಣ ಬಂಧಿತ ಆರೋಪಿಗಳು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶಿವಕುಮಾರ್
ಚಳ್ಳಕೆರೆ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕರಾದ ಶಿವಕುಮಾರ್ ಟಿ.ಎಂ. ಅವರ ಮಾರ್ಗದರ್ಶನದಲ್ಲಿ ಮೊಳಕಾಲ್ಮೂರು ಪೊಲೀಸ್ ವೃತ್ತ ನಿರೀಕ್ಷಕರಾದ ವಸಂತ ವಿ. ಅಸೋದೆ ರವರ ನೇತೃತ್ವದಲ್ಲಿ ಮೊಳಕಾಲ್ಮೂರು ಠಾಣೆಯ ಪಿ.ಎಸ್.ಐ. ಮಹೇಶ್ ಲಕ್ಷ್ಮಣ ಹೊಸಪೇಟ, ಸಿಬ್ಬಂದಿಯವರಾದ ವೀರಣ್ಯ, ಖಾದರ್ ಭಾಷ, ಪ್ರಭುದೇವ, ಶಿವಾನಂದ, ಹುಲುಗಪ್ಪ ಭೋವಿ ರವರು ಕಾರ್ಯಾಚರಣೆಯಲ್ಲಿ ಇದ್ದರು. ಪೊಲೀಸರ ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಒಂದು ಜೊತೆ ಬಂಗಾರದ ಹ್ಯಾಂಗಿಗ್ಸ್, 20 ಗ್ರಾಂ ಬಂಗಾರದ ನಕ್ಲೆಸ್ 10 ಗ್ರಾಂನ ಬಂಗಾರದ ಕಿವಿಯೋಲೆ, 05 ಗ್ರಾಂ ನ ಬಂಗಾರದ ಕಿವಿಯೋಲೆ ಸೇರಿದಂತೆ ಒಟ್ಟು 40 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 35,000/- ರೂಪಾಯಿ ನಗದು ಹಣ ವಶಕ್ಕೆ ಪಡೆಯಲಾಗಿದೆ. ಹಾಗೂ ಮನೆ ಕಳ್ಳತನಕ್ಕೆ ಉಪಯೋಗಿಸಿದ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join WhatsApp

Join Now

Join Telegram

Join Now