ಹೊಸದುರ್ಗ ಪೊಲೀಸರ ಕಾರ್ಯಾಚರಣೆ : ಇಬ್ಬರು ಸರಗಳ್ಳರ ಬಂಧನ

1 Min Read

ಚಿತ್ರದುರ್ಗ, (ಜ.27) : ಇತ್ತೀಚೆಗೆ ಬೈಕ್‌ನಲ್ಲಿ ಬಂದು ಒಂಟಿಯಾಗಿ ಓಡಾಡುವ ಮಹಿಳೆಯರ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ಹೊಸದುರ್ಗ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತರನ್ನು ಶಿರಾ ತಾಲ್ಲೂಕಿನ ಮದಾಕನಹಳ್ಳಿ ಗ್ರಾಮದ ಸುರೇಶ(32) ಮತ್ತು ಶ್ರೀನಿವಾಸ(21) ಎಂದು ಗುರುತಿಸಲಾಗಿದೆ.
ಬಂಧಿತರಿಂದ 3,14,000 ರೂಪಾಯಿ ಬೆಲೆಬಾಳುವ 70 ಗ್ರಾಂ ತೂಕದ ಎರಡು ಮಾಂಗಲ್ಯ ಸರಗಳು, ಸುಮಾರು 50,000 ರೂಪಾಯಿ ಬೆಲೆಬಾಳುವ ಮೋಟಾರ್ ಸೈಕಲ್ ಅನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸದುರ್ಗ ಪೊಲೀಸ್ ಠಾಣೆ ಸರಹದ್ದಿನ ಗ್ರಾಮಗಳ ಕಡೆ ಮೋಟಾರ್ ಸೈಕಲ್ ವಾಹನದಲ್ಲಿ ಯಾರೋ ಅಸಾಮಿಗಳು ಬಂದು ಒಂಟಿಯಾಗಿ ಓಡಾಡುವ ಮಹಿಳೆಯರ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಹೋಗಿರುವ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಎಸ್.ಪಿ. ಕೆ.ಪರುಶರಾಮ, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ.ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ, ರಮೇಶ್ ಕುಮಾರ್ಡಿ.ವೈ.ಎಸ್.ಪಿ ಹಿರಿಯೂರುರವರ ಉಸ್ತುವಾರಿಯಲ್ಲಿ, ಎಂ.ಡಿ.ಫೈಜುಲ್ಲ, ಪಿ.ಐ. ಹೊಸದುರ್ಗರವರ
ನೇತೃತ್ವದಲ್ಲಿ ಹೊಸದುರ್ಗ ಪೊಲೀಸ್ ಠಾಣೆ ಪಿ.ಎಸ್.ಐ ಮಹೇಶ್ ಗೌಡ, ಪ್ರೋ.ಪಿ.ಎಸ್.ಐ ಭೀಮನಗೌಡ ಪಾಟೀಲ್, ಶ್ರೀಪುಟ್ಟಪ್ಪ.ಎಎಸ್‍ಐ, ಹಾಗೂ ಸಿಬ್ಬಂದಿಯವರಾದ ಮಂಜುನಾಥ, ಗೌಸ್ ಸಾಹೇಬ್, ಗಂಗಾಧರ, ತಿಪ್ಪೇಸ್ವಾಮಿ ರವರ ತಂಡವು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸದುರ್ಗ ಪೊಲೀಸರ ಈ ಕಾರ್ಯವನ್ನು ಎಸ್.ಪಿ.ಪರುಶರಾಮ.ಕೆ ಅವರು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *