ಚಿತ್ರದುರ್ಗ, (ಫೆಬ್ರವರಿ.03) : ಹೊಸದುರ್ಗ ಪಟ್ಟಣದಲ್ಲಿ ಎಲ್ಲಾ 1 ರಿಂದ 23 ವಾರ್ಡ್‍ಗಳಲ್ಲಿರುವ ವಾಸದ ಮನೆ, ವಾಣಿಜ್ಯ ಕಟ್ಟಡ ಹಾಗೂ ಶಾಲಾ ಕಾಲೇಜುಗಳು ಶೌಚಾಲಯಗಳನ್ನು ಹೊಂದಿದ್ದು, ಯಾರೂ ಸಹ ಬಯಲು ಶೌಚಾಲಯ ಮಾಡದಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಸರ್ಕಾರದಿಂದ ಈಗಾಗಲೇ ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಿದೆ.
ಹೊಸದುರ್ಗ ಪಟ್ಟಣದಲ್ಲಿ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಪಟ್ಟಣದ ವ್ಯಾಪ್ತಿಯಲ್ಲಿ ಯಾರೂ ಸಹ ಬಯಲು ಶೌಚ ಮಾಡದಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಹಾಗೂ ಸ್ವಚ್ಛ ಭಾರತ್ ಮಿಷನ್‍ನ ಬಯಲು ಶೌಚ ಮುಕ್ತ ಮಾರ್ಗಸೂಚಿಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗಿದ್ದು, ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಹೊಸದುರ್ಗ ಪಟ್ಟಣವನ್ನು ಬಯಲು ಶೌಚಮುಕ್ತ ಪ್ಲಸ್ ಪ್ಲಸ್ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ ಎಂದು ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.