Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೊಸದುರ್ಗ | ಮದುವೆ ಮಾಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ ಮಗ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಹೊಸದುರ್ಗ, ಜನವರಿ. 08 : ಮದುವೆ ಮಾಡಲಿಲ್ಲ ಎನ್ನುವ ಕಾರಣಕ್ಕೆ ಮಗನೊಬ್ಬ ತಂದೆಯನ್ನ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ತಂದೆ ಮಲಗಿದ್ದ ವೇಳೆ ರಾಡ್ ನಿಂದ ತಲೆಗೆ ಹೊಡೆದು ಹತ್ಯೆಗೈದಿರುವಂತ ಘಟನೆ ತಾಲ್ಲೂಕಿನ ಅತ್ತಿಘಟ್ಟದಲ್ಲಿ ನಡೆದಿದೆ..

ಸಣ್ಣನಿಂಗಪ್ಪ ಎನ್ನುವ ವ್ಯಕ್ತಿ ‌ಮಗನಿಂದ ಕೊಲೆಯಾಗಿದ್ದಾರೆ. ಮೃತ ಸಣ್ಣನಿಂಗಪ್ಪನಿಗೆ ಮೂವರು ಮಕ್ಕಳು. ಹಿರಿಯ ಮಗ ಮಾರುತಿಯಾಗಿದ್ದರೇ, ಎರಡನೇ ಮಗ ನಿಂಗರಾಜ, ಕಿರಿಯ ಮಗಳು ಜ್ಯೋತಿ. ಮಾರುತಿ ಹಾಗೂ ಜ್ಯೋತಿಗೆ ಮದುವೆಯಾಗಿತ್ತು. ಎರಡನೇ ಮಗ ನಿಂಗರಾಜ ಮದುವೆ ಆಗಿರಲಿಲ್ಲ.ಈ ವಿಚಾರಕ್ಕೆ ನಿಂಗರಾಜು ತಂದೆ ಸಣ್ಣ ನಿಂಗಪ್ಪ ಜೊತೆಗೆ ಜಗಳ ಮಾಡಿದ್ದಾನೆ. ಈ ವೇಳೆ ಹೊಸದುರ್ಗದಲ್ಲಿ ಇದ್ದಂತ ಹಿರಿಯ ಮಗ ಮಾರುತಿಯನ್ನು ಮನೆಗೆ ಕರೆದು ಬುದ್ದಿ ಹೇಳಿಸಿದ್ದಾರೆ. ಆಗ ಸುಮ್ಮನೇ ಆಗಿದ್ದಂತ ನಿಂಗರಾಜ, 11 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದಂತ ತಂದೆ ಸಣ್ಣನಿಂಗಪ್ಪನಿಗೆ ಟ್ರ್ಯಾಕ್ಟರ್ ರಾಡ್ ನಿಂದ ತಲೆ ಹೊಡೆದು ಪರಾರಿ ಆಗಿದ್ದಾನೆ.

ಹಲ್ಲೆಗೆ ಒಳಗಾಗಿ ತೀವ್ರ ರಕ್ತಸ್ರಾವಗೊಂಡಿದ್ದ ಸಣ್ಣ ನಿಂಗಪ್ಪನನ್ನು ಹೊಸದುರ್ಗ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷೆ ನಡೆಸಿದಂತ ವೈದ್ಯರು ಸಣ್ಣ ನಿಂಗಪ್ಪ ಮೃತ ಪಟ್ಟಿರುವ ವಿಷಯವನ್ನು ಖಚಿತ ಪಡಿಸಿದ್ದಾರೆ.

ಹಿರಿಯ ಮಗ ಮಾರುತಿ, ಹೊಸದುರ್ಗ ಪೊಲೀಸ್ ಠಾಣೆಗೆ ತೆರಳಿ ತಮ್ಮ ನಿಂಗರಾಜ, ತಂದೆ ಸಣ್ಣ ನಿಂಗಪ್ಪನನ್ನು ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ದೂರು ದಾಖಲಿಸಿಕೊಂಡ ಹೊಸದುರ್ಗ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ರಮೇಶ್ ನೇತೃತ್ವದಲ್ಲಿ ಪಿಎಸ್‌ಐ ಮಹೇಶ್ ಕುಮಾರ್.ಎಸ್, ಕ್ರೈಂ ಪಿಸಿ ರಮೇಶ್ ಕೊಲೆ ಆರೋಪಿ ನಿಂಗರಾಜ ಬಂಧಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...