ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ತಾಲ್ಲೂಕಿನ ಹೆಗ್ಗೆರೆ ಗ್ರಾಮದ ವಾಸಿ ಶ್ರೀಮತಿ ಶಿವಗಂಗಮ್ಮ (75ವರ್ಷ) ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರ ಜಿಲ್ಲಾ ಆಸ್ಪತ್ರೆಯ ನೌಕರ ವೈ. ಶ್ರೀಧರ್ ಮೂರ್ತಿಯವರು ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸಂಜೆ ಸ್ವ ಗ್ರಾಮ ಹೆಗ್ಗೆರೆಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನೇತ್ರದಾನ : ಮೃತರ ಎರಡು ಕಣ್ಣುಗಳನ್ನು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಚಿತ್ರದುರ್ಗ ಇವರಿಗೆ ನೇತ್ರದಾನ ಮಾಡಿ ಕುಟುಂಬದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ.
ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ, ಸಂಸ್ಥೆಯು ಪ್ರಶಂಸನಾ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಡಾ. ಟಿ. ವೆನಿಲಾ, ಡಾ. ಪ್ರಕೃತಿ, ರಾಮು, ಎಸ್.ವೀರೇಶ್, ಟಿ.ವೀರಭದ್ರಸ್ವಾಮಿ, ಎಸ್.ವಿ.ಗುರುಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.


