ಹೊಸದುರ್ಗ | ಶೈಕ್ಷಣಿಕ ಪ್ರವಾಸಕ್ಕೆ ವಿಮಾನ ಏರಿದ ಸರ್ಕಾರಿ ಶಾಲೆ ಮಕ್ಕಳು

1 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 06 ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫ್ ಎಂದೇ ಕರೆಯಲಾಗುತ್ತದೆ. ಈ ಸಂದರ್ಭ ಮಕ್ಕಳು ಅನೇಕ ಕನಸುಗಳನ್ನು ಕಟ್ಟಿಕೊಂಡು ಸಂಭ್ರಮಿಸುತ್ತಾರೆ. ಅದರಲ್ಲೂ ಪ್ರತಿ ಮಕ್ಕಳಿಗೂ ವಿಮಾನ, ರೈಲು ನೋಡಬೇಕೆಂಬ ಕುತೂಹಲ. ಒಮ್ಮೆಯಾದ್ರೂ ಅದನ್ನು ಹತ್ತಿ ಇಳಿಯಬೇಕೆಂದು ಆಸೆ.

ಹೌದು, ಇಂತಹದ್ದೊಂದು ಕನಸನ್ನು ಶಿಕ್ಷಕರು, ದಾನಿಗಳು ಈಡೇರಿಸಿದ್ದು, 19 ವಿದ್ಯಾರ್ಥಿಗಳನ್ನು ಶಿವಮೊಗ್ಗಕ್ಕೆ ಕರೆದೊಯ್ದು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿವಿಧ ಐತಿಹಾಸಿಕ, ಪ್ರಮುಖ ಸ್ಥಳಗಳನ್ನು ತೋರಿಸಿದ್ದಾರೆ.

ಇಂತಹದ್ದೊಂದು ಭಾಗ್ಯ ಪಡೆದವರು ಹೊಸದುರ್ಗ ತಾಲೂಕು ಮರಬಘಟ್ಟ ಸರ್ಕಾರಿ ಶಾಲೆ ಮಕ್ಕಳು. ಸಾಮಾನ್ಯವಾಗಿ ಪ್ರವಾಸ ಎಂಬುದು ಬಸ್‌ಗಳಲ್ಲಿ ಹೋಗುತ್ತಾರೆ. ಆದರೆ, ಈ ಶಾಲೆಯ ಶಿಕ್ಷಕ ಯೋಗರಾಜ ನೇತೃತ್ವ ವಹಿಸಿದ್ದು, ಇದರ ಸಂಪೂರ್ಣ ವೆಚ್ವವನ್ನು ಶಿಕ್ಷಕರು ಮತ್ತು ದಾನಿಗಳು ಭರಿಸಿ, ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸದ ಭಾಗ್ಯ ಕಲ್ಪಿಸಿ ಗಮನಸೆಳೆದಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ಹಲವು ಕನಸುಗಳು ಇರುತ್ತವೆ. ಆದರೆ, ಅದನ್ನು ಪೂರೈಸಲು ಆರ್ಥಿಕ ಸಮಸ್ಯೆ ಹೆಚ್ಚು. ಅದರಲ್ಲೂ ಸರ್ಕಾರಿ ಶಾಲೆ ಮಕ್ಕಳಿಗೆ ಗಗನಕುಸುಮ. ಇಂತಹದ್ದೊಂದು ಕನಸನ್ನು ಈಡೇರಿಸಿರುವ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ಗ್ರಾಮದ ದಾನಿಗಳು ಜನರ ಮೆಚ್ಚುಗೆ ಗಳಿಸಿದ್ದಾರೆ.

ಸುದ್ದಿಒನ್ ಜತೆಗೆ ಶಿಕ್ಷಕ ಯೋಗರಾಜ್ ಮಾತನಾಡಿ, ಮುದ್ದೇನಹಳ್ಳಿ, ಈಶಾ ಫೌಂಡೇಶನ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಲಾಲ್ ಬಾಗ್, ಜಲಸಾರಿಗೆ ಹಾಗೂ ಮೆಟ್ರೋ ಸೇರಿ ವಿವಿಧ ಸ್ಥಳಗಳನ್ನು ಮಕ್ಕಳಿಗೆ ತೋರಿಸಿ, ಆಧುನೀಕತೆಯ ಪರಿಚಯ ಮಾಡಿಸಲಾಗಿದೆ. ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ತೋರಿಸಬೇಕು. ಕಲಿಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಲಾಗಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *