ಯೋಗ ಒಂದು ಧರ್ಮವಲ್ಲ, ಇದೊಂದು ವಿಜ್ಞಾನ : ಗೋವಿಂದಪ್ಪ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜೂ. 23 : ಯೋಗ ಒಂದು ಧರ್ಮವಲ್ಲ. ಇದು ವಿಜ್ಞಾನ, ಯೋಗಕ್ಷೇಮದ ವಿಜ್ಞಾನ, ಯೌವನದ ವಿಜ್ಞಾನ, ದೇಹ, ಮನಸ್ಸು, ಆತ್ಮ ಮತ್ತು ಕ್ರಿಯೆಯನ್ನು ಸಂಯೋಜಿಸುವ ವಿಜ್ಞಾನ ಎಂದು ಯೋಗ ಗುರು ಗೋವಿಂದಪ್ಪ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ನೀಲಾದ್ರಿ ನೇಸರ ಕ್ಷೇಮಾಭಿವೃದ್ಧಿ ಸಂಘ (ರಿ.)ದವತಿಯಿಂದ ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಯೋಗ ಮಾಡುವುದರಿಂದ ಪ್ರತಿಯೊಬ್ಬರಿಗೂ ಆರೋಗ್ಯ ಸುಧಾರಿಸುತ್ತದೆ.

ಪ್ರತಿನಿತ್ಯ ಯೋಗ ಮಾಡುವುದರಿಂದ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಯೋಗ ನಮ್ಮ ಪುರಾತನವಾದ ವಿದ್ಯೆಯಾಗಿದೆ, ಇದನ್ನು ನಮ್ಮ ಹಿರಿಯರು ಮಾಡಿಕೊಂಡು ಬಂದಿದ್ದಾರೆ. ಇದನ್ನು ಈಗ ನಾವು ಮುಂದುವರೆಸಿಕೊಂಡು ಹೋಗಬೇಕಿದೆ, ಇದನ್ನು ನಮ್ಮ ಮಕ್ಕಳಿಗೆ ಕಲಿಸಬೇಕಿದೆ ಎಂದರು.

ಯೋಗವನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದಾಗಿದೆ, ಸಾಧ್ಯವಾದಷ್ಟು ಮಟ್ಟಿಗೆ ವೈದ್ಯರನ್ನು ದೂರ ಇಡಬಹುದಾಗಿದೆ. ಇದನ್ನು ಮಾಡಲು ವಯಸ್ಸಿನ ನಿಬಂಧನೆ ಇಲ್ಲ ಯಾರು ಬೇಕಾದರೂ ಸಹಾ ಮಾಡಬಹುದಾಗಿದೆ. ಯೋಗವನ್ನು ಮಾಡಲು ನಿಗಧಿತವಾದ ಸ್ಥಳದ ಅಗತ್ಯ ಇಲ್ಲ ಸ್ವಲ್ಪ ಜಾಗದಲ್ಲಿದಾರೂ ಸಹಾ ಮಾಡಬಹುದಾಗಿದೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೀಲಾದ್ರಿ ನೇಸರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಭಾಗವಹಿಸುವುದರ ಮೂಲಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೂಂಡಿದ್ದರು. ವಂದಪ್ಪ ಯೋಗವನ್ನು ತಿಳಿಸಿಕೊಟ್ಟರು.

ನೀಲಾದ್ರಿ ನೇಸರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಿಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ನಳಿನಿ ಶ್ರೀನಿವಾಸ್, ನಿರ್ದೇಶಕರಾದ ಶ್ರೀನಿವಾಸ್, ಕಾರ್ಯದರ್ಶಿ ಅಭಿಲಾಷ್, ಯಶವಂತ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *