ರಾಜ್ಯದಲ್ಲಿ ಹನಿಟ್ರ್ಯಾಪ್ ಸುದ್ದಿ ಸದ್ದು ಮಾಡುತ್ತಿದೆ. ಕೆ.ಎನ್.ರಾಜಣ್ಣ ಅವರು ಹನಿಟ್ರ್ಯಾಪ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಅನ್ನೋ ಚರ್ಚೆಯಾಗುತ್ತಿರುವಾಗಲೇ, ಶಾಸಕ ಮುನಿರತ್ನ ಅವರು ಡಿಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿದ್ದರು. ಇದೀಗ ಆ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಮಡಿಕೇರಿ ಪ್ರವಾಸದಲ್ಲಿರೋ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನೀವೂ ಹಾಯ್ ಎನ್ನದೇ ಅವರು ಹಾಯ್ ಅಂತಾರಾ..? ಹನಿಟ್ರ್ಯಾಪ್ ಮಾಡೋದಲ್ಲ ಹನಿಟ್ರ್ಯಾಪ್ ಆಗೋದು. ವಿಧಾನಸೌಧದಲ್ಲಿ ಏನೇನು ಮಾಡಿದ್ದಾರೆ ಅಂತ ಕಂಪ್ಲೀಟ್ ಆಗಿ ಗೊತ್ತಿದೆಯಲ್ಲ. ಪಾಪ ಬಿಜೆಪಿ ಅವರೇ ಏನೋ ಹೇಳುತ್ತಿದ್ದರು. ಅಶೋಕ್ ಗೆ ಏನೇನು ಆಯ್ತು. ಪಾಪ ಅವರ ನೋವನ್ನ ಹೇಳಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಎಂದಿದ್ದಾರೆ.

ಇದೆ ವೇಳೆ ನಿಮ್ಮದೇ ಸರ್ಕಾರದಲ್ಲಿ ನಿಮ್ಮ ಸಚಿವರಿಗೆ ರಕ್ಷಣೆ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಯಾರೂ ಹೇಳಿದ್ದು ರಕ್ಷಣೆ ಇಲ್ಲ ಅಂತ. ಹನಿಟ್ರ್ಯಾಪ್ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಹನಿಟ್ರ್ಯಾಪ್ ಸುಮ್ ಸುಮ್ಮನೆ ನಿಮ್ಮ ಹತ್ತಿರ ಯಾರಾದ್ರೂ ಬಂದು ಬಿಡುತ್ತಾರಾ..? ನೀವೂ ಹಲೋ ಅಂದ್ರೆ ಅವರು ಹಲೋ ಅಂತಾರೆ. ನೀವೂ ಹಲೋ ಅಂದಿಲ್ಲ ಅಂದ್ರೆ ಯಾರಾದ್ರೂ ಹಲೋ ಅಂತಾರಾ..? ನೀವೂ ಮಾತಾನಾಡುತ್ತಿದ್ದಕ್ಕೆ ತಾನೇ ನಾನು ಮಾತನಾಡುತ್ತಿದ್ದೇನೆ. ನೀವೂ ಮಾತನಾಡಿಸಿಲ್ಲ ಅಂದ್ರೆ ನಾನು ಮಾತಾಡ್ತೀನಾ..? ನೀವೂ ವಿಶ್ ಮಾಡಿದ್ರೆ ನಾನು ವಿಶ್ ಮಾಡ್ತೇನೆ. ನೀವೂ ವಿಶ್ ಮಾಡಿಲ್ಲ ಅಂದ್ರೆ ನಾನು ವಿಶ್ ಮಾಡ್ತೀನಾ..? ಅದು ಕೂಡ ಹಂಗೆ ಎಂದಿದ್ದಾರೆ.

