ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಕೆ.ಎನ್.ರಾಜಣ್ಣ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಈ ಸಂಬಂಧ ಇನ್ನು ದೂರು ನೀಡಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರು ಕೂಡ ಈ ಸಂಬಂಧ ಸಾಕಷ್ಟು ಬಾರಿ ಹೇಳಿದ್ದಾರೆ. ಮೊದಲು ಈ ಸಂಬಂಧ ಪೊಲೀಸ್ ದೂರು ಕೊಡಲಿ. ಆಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.

ದೂರು ಕೊಡುವುದಕ್ಕೂ ಮುಂದಾದ ಕೆ.ಎನ್.ರಾಜಣ್ಣ ಅದಕ್ಕೂ ಮುನ್ನ ಹನಿಟ್ರ್ಯಾಪ್ ಮಾಡಲು ಬಂದ ಹುಡುಗಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನೀಲಿ ಬಣ್ಣದ ಜೀನ್ಸ್, ಬ್ಲೂ ಟಾಪ್ ಹಾಕಿಕೊಂಡು ಪರ್ಸನಲ್ ಆಗಿ ಮಾತನಾಡ್ಬೇಕು ಎಂದು ಹನಿಟ್ರ್ಯಾಪ್ ಗೆ ಪ್ರಯತ್ನಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಹನಿಟ್ರ್ಯಾಪ್ ವೇಳೆ ಬೆಂಗಳೂರಿನ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ, ಇದ್ದಿದ್ದರೆ ಅವರು ಯಾರು ಎಂದು ಕಂಡು ಹಿಡಿಯಬಹುದಿತ್ತು ಎಂದಿದ್ದಾರೆ.

ಈ ಸಂಬಂಧ ಗೃಹ ಸಚಿವರು ಎಲ್ಲಿಯೇ ಇದ್ದರು ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ. ರಾಜಣ್ಣ ದೂರು ಕೊಟ್ಟರೆ ತನಿಖೆ ನಡೆಸುತ್ತೀನಿ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದರು. ದೂರು ಕೊಡಲು ನಿರ್ಧರಿಸಿರುವ ರಾಜಣ್ಣ, ಮಾರ್ಚ್ 30ರ ಬಳಿಕ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಹನಿಟ್ರ್ಯಾಪ್ ಬಗ್ಗೆಯೂ ಮಾಹಿತಿ ತೆಗೆದುಕೊಂಡಿದ್ದಾರೆ. ಈಗ ರಾಜಣ್ಣ ಅವರು ಕೂಡ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಹನಿಟ್ರ್ಯಾಪ್ ವಿಚಾರ ತಿಳಿಸುವುದಾಗಿ ಹೇಳಿದ್ದಾರೆ.


