ಬೆಂಗಳೂರು: ಕಸ್ತೂರಿ ರಂಗನ್ ವರದಿ ವಿರೋಧಿಸಿ ಮಳೆನಾಡು ಭಾಗದ ಶಾಸಕರ ಸಭೆ ನಡೆಯುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪ್ರದೇಶ ಅರಣ್ಯ ಅತಿಸೂಕ್ಷ್ಮ ಪ್ರದೇಶ ಎಂದು ಗುರುತಿಸಿದೆ. ಹೀಗಾಗಿ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಕೇಂದ್ರ ಸರ್ಕಾರ ನಿಲುವು ಆದೇಶ ರೂಪದಲ್ಲಿ ಬಂದ್ರೆ, ಆ ಭಾಗದ ಜನರು ಬದುಕು ದುಸ್ತರವಾಗುತ್ತೆ, ಹೀಗಾಗಿ ಇದನ್ನ ಕಟುವಾಗಿ ವಿರೋಧಿಸಲು ಆರಗ ಜ್ಞಾನೇಂದ್ರ ಸಭೆ ಕರೆದಿದ್ದಾರೆ. ಜುಲೈ 18 ಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಈ ಸಭೆ ನಡೆಯಲಿದೆ.
ಈ ಹಿಂದೆ ಕಸ್ತೂರಿ ರಂಗನ್ ವರದಿಯನ್ನ ಕರ್ನಾಟಕ ಸರ್ಕಾರ ತಿರಸ್ಕಾರ ಮಾಡಿತ್ತು. ಆದರೆ ಈಗ ಮತ್ತೆ ಕಸ್ತೂರಿ ರಂಗನ್ ವರದಿ ಚಾಲ್ತಿಗೆ ಬಂದಿದ್ದು, ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಗೃಹ ಸಚಿವರೇ ಇದನ್ನು ವಿರೋಧಿಸಿ ಸಭೆ ನಡೆಸಲು ಹೊರಡಿದ್ದಾರೆ. ಸಭೆಯಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.