ಬೆಂಗಳೂರು: ತಮಿಳುನಾಡಿನ ಬಳಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಹೆಲಿಕಾಪ್ಟರ್ ನಲ್ಲಿ 14 ಜನ ಪ್ರಯಾಣ ಮಾಡ್ತಾ ಇದ್ರು. ಅದರಲ್ಲಿ ಬದುಕುಳಿದಿದ್ದು ಮಾತ್ರ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಬ್ಬರೆ.
ಸದ್ಯ ಅವರ ಆರೋಗ್ಯ ಸುಧಾರಿಸಲಿ, ಆದಷ್ಟು ಬೇಗ ಗುಣಮುಖರಾಗಲಿ ಅಂತ ಭಾರತದ ಕೋಟಿ ಕೋಟಿ ಜನರು ಹಾರೈಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿಯೆ ಬೆಂಗಳೂರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ವಿಚಾರಿಸಲು ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂಡ ಅವರು ಆಸ್ಪತ್ರಗೆ ಭೇಟಿ ನೀಡಿದ್ದರು.
ಓಲ್ಡ್ ಏರ್ಪೋರ್ಟ್ ನಲ್ಲಿರುವ ಕಮಾಂಡೋ ಆಸ್ಪತ್ರೆಯಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಗೃಹ ಸಚಿವರು ಭೇಟಿ ನೀಡಿ, ವೈದ್ಯರ ಬಳಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ ವರುಣ್ ಸಿಂಗ್ ಅವರ ತಂದೆ ತಾಯಿಯನ್ನು ವಿಚಾರಿಸಿ, ಧೈರ್ಯ ತುಂಬಿದ್ದಾರೆ. ಸದ್ಯ ವರುಣ್ ಸಿಂಗ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ.