ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಿಟ್ ಕಾಯಿನ್ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಬಿಟ್ ಕಾಯಿನ್ ಮರು ತನಿಖೆ ನಡೆಸುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ. ಬಿಜೆಪಿಯವರು ಈಗಾಗಲೇ ಕುಣಿದಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದು ಇನ್ನು 20 ದಿನ ಆಗಿದೆ ಅಷ್ಟೆ. ಬಿಟ್ ಕಾಯಿನ್ ಕೇಸನ್ನು ಮರು ತನಿಖೆ ಮಾಡುತ್ತೇವೆ ಎಂದಿದ್ದಾರೆ.
ನಿನ್ನೆಯಷ್ಟೇ ಸಂಸದ ಪ್ರತಾಪ್ ಸಿಂಹ ಅವರು ಬಿಟ್ ಕಾಯಿನ್ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್ ನವರು ಬಿಟ್ ಕಾಯಿನ್ ವಿಚಾರವನ್ನು ಚುನಾವಣಾ ವಿಚಾರವಾಗಿ ತೆಗೆದುಕೊಂಡಿದ್ದರು. ಈಗ ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ ಬೆನ್ನಲ್ಲೇ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
2020ರಲ್ಲಿ ಸಿಸಿಬಿ ಪೊಲೀಸರು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸಹಚರರನ್ನು ಡ್ರಗ್ ಕೇಸಲ್ಲಿ ಬಂಧಿಸಿದ್ದರು. ಬಿಟ್ ಕಾಯಿನ್ ಗಳನ್ನು ಬಳಸಿಕೊಂಡು ಡ್ರಗ್ ಗಳನ್ನು ಸಂಗ್ರಹಿಸಿದ್ದಾನೆ. ಜೊತೆಗೆ ಅದನ್ನು ತಮ್ಮ ಹೈಫೈ ಪ್ರೊಫೈಲ್ ಗಳಿಗೆ ಮಾರಾಟ ಮಾಡುತ್ತಿದ್ದ. ಇದೀಗ ಅದೇ ಕೇಸನ್ನು ಮರು ತನಿಖೆ ಮಾಡಲು ಹೊರಟಿದ್ದಾರೆ.