ಬೆಂಗಳೂರು: ಕೆಲವೊಂದು ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಅಂಗಡಿ ಮುಗ್ಗಟ್ಟು ಹಾಕಲು ನಿರ್ಬಂಧ ಹೇರಲಾಗಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಮಾರಿಕಾಂಬ ಜಾತ್ರೆಯಲ್ಲೂ ಈ ನಿಯಮವನ್ನ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಹಿಜಾಬ್ ತೀರ್ಮಾನ ಬಂದ ಮೇಲೆ ಕೋರ್ಟಿನ ತೀರ್ಪಿನ ವಿರುದ್ಧ ಅಂಗಡಿಗಳನ್ನ ಬಂದ್ ಮಾಡಿದ್ರು. ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದರು. ಅದರ ಮುಂದುವರೆದ ಭಾಗ ಇದು. ಇದು ದುರದೃಷ್ಟಕರ. ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ವಹಿವಾಟಿಗೆ ಕಡಿವಾಣ ಹಾಕೋದಕ್ಕೆ ಉಡುಪಿಯಿಂದ ಆರಂಭವಾಗಿದ್ದು. ಇದು ರಾಜ್ಯದೆಲ್ಲೆಡೆ ಅಲ್ಲಲ್ಲಿ ಹರಡುತ್ತಿದೆ. ಹಿಜಾಬ್ ವಿಚಾರ ಕೂಡ ಇದೇ ರೀತಿ ಆಗಿತ್ತು. ಉಡುಪಿಯಲ್ಲಿ ಶುರುವಾದ ಹಿಜಾಬ್ ವಿವಾದ ಎಲ್ಲೆಡೆ ರಭಸವಾಗಿ ಹರಡಿತ್ತು. ಕೋರ್ಟ್ ಕಟಕಟೆಯಲ್ಲಿ ಹಿಜಾಬ್ ತೀರ್ಮಾನವಾಗಿದೆ. ಕೋರ್ಟ್ ಆದೇಶವನ್ನೇ ಮುಸ್ಲಿಂ ಸಮುದಾಯದವರು ಧಿಕ್ಕರಿಸಿರುವುದೇ ಇಂದು ವ್ಯಾಪಾರ ವಹಿವಾಟಿಗೆ ಅಡ್ಡಗಾಲಾಗಿದೆ.