ಬೆಂಗಳೂರು: ಮೂಡಾ ಹಗರಣ ರಾಜ್ಯ ರಾಜಕೀಯದಲ್ಲಿಯೇ ತಲ್ಲಣ ಉಂಟು ಮಾಡಿತ್ತು. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಖುರ್ಚಿಯನ್ನೇ ಬಿಟ್ಟು ಕೊಡುವ ಸ್ಥಿತಿ ತಲುಪಿತ್ತು. ಆದರೆ ಪ್ರಕರಣ ಶಾಂತವಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ಹಾಗೆ ಇಟ್ಟುಕೊಂಡು ತನಿಖೆ ಹೆದರಿಸುತ್ತಿದ್ದಾರೆ. ಇದೀಗ ಮೂಡಾ ಮಾಜಿ ಆಯುಕ್ತ ನಟೇಶ್ ಅವರ ವಿರುದ್ಧ ಪಾ್ರಸಿಕ್ಯೂಷನ್ ಗೆ ಗೃಹ ಇಲಾಖೆ ಸೂಚನೆ ನೀಡಿದೆ. ಲೋಕಾಯುಕ್ತ ಪೊಲೀಸರಿಗೆ ವಿಚಾರಣೆ ನಡೆಸಲು ಸರ್ಕಾರ ಅನುಮತಿ ನೀಡಿದೆ.
ಯಾವುದೇ ಸರ್ಕಾರಿ ಅಧಿಕಾರಿಯ ವಿಚಾರಣೆ ನಡೆಸುವುದಕ್ಕೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಬೇಕಾಗಿದೆ. ಹೀಗಾಗಿ 17(A) ಅಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ಕೋರಿದ್ದರು. ಇದೀಗ ಅನುಮತಿ ಬಳಿಕ ನಟೇಶ್ ಅವರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ. ಸೈಟ್ ಮರು ಹಂಚಿಕೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆಂದು ಆಯುಕ್ತರಾಗಿದ್ದಂತ ನಟೇಶ್ ಅವರ ಮೇಲೆ ಆರೋಪವಿದೆ.
ನಟೇಶ್ ಅವರು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ. ಇತ್ತೀಚೆಗೆ ನಗರದ ಮಲ್ಲೇಶ್ವರಂನಲ್ಲಿರುವ 10ನೇ ಕ್ರಾಸ್ ನಲ್ಲಿರುವ ನಟೇಶ್ ಮನೆ ಮೇಲೂ ಇಡಿ ದಾಳಿ ನಡೆಸಿತ್ತು. ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ, 4 ಬ್ಯಾಗ್ ಗಳನ್ನು ಕೊಂಡೊಯ್ದಿದ್ದರು. ಅವರನ್ನು ವಶಕ್ಕು ಪಡೆದಿದ್ದರು. ಈಗ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಲು ಸಜ್ಜಾಗಿದ್ದಾರೆ. ನಟೇಶ್ ಅವರಿಗೆ ನೋಟೀಸ್ ಕೂಡ ನೀಡಿದ್ದಾರೆ.