ಹೊಳಲ್ಕೆರೆ | ಬಟ್ಟೆ ತೊಳೆಯಲು ಹೋದ ಇಬ್ಬರು ನೀರುಪಾಲು.

0 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಹೊಳಲ್ಕೆರೆ, ಫೆಬ್ರವರಿ. 15 : ತಾಲೂಕಿನ ಕಾಲ್ಕೆರೆ ಗ್ರಾಮದ ಕೆರೆಯಲ್ಲಿ ಬಟ್ಟೆ ತೋಳೆಯಲು ಹೋದ ಇಬ್ಬರು ಕಾಲು ಜಾರಿಬಿದ್ದು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ.

ಕಾಲ್ಕೆರೆ ಗ್ರಾಮದ ಕವಿತಾ ಹನುಮಂತಪ್ಪ(14 ವರ್ಷ) ಮತ್ತು ಪ್ರಜ್ವಲ್ ಪ್ರಭು(12 ವರ್ಷ) ಮೃತರು ದುರ್ದೈವಿಗಳಾಗಿದ್ದಾರೆ. ಈ ಇಬ್ಬರು ಬಟ್ಟೆಗಳನ್ನ ತೋಳೆಯಲು ಕೆರೆ ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದ ಮೃತಪಟ್ಟಿದ್ದಾರೆ. ಇಬ್ಬರು ಕಳೆದುಕೊಂಡ ಕುಟುಂಬದ ಅಕ್ರಂದನ ಮುಗಿಲು‌ ಮುಟ್ಟಿದೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article
Enable Notifications OK No thanks