ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 07 : ಹೊಳಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರುಗಳ ಸ್ಥಾನಕ್ಕೆ ಭಾನುವಾರ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಎಸ್.ಆರ್.ಗಿರೀಶ್ ಮಾಧುರಿ ಗುಂಪು ಜಯಗಳಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಎಸ್.ಆರ್.ಗಿರೀಶ್-670, ಹೆಚ್.ಕುಬೇರಪ್ಪ-471, ಎ.ಎನ್.ಮೌನೇಶ್-466, ವೀರಭದ್ರಪ್ಪ ಯು.ಎಂ.-446, ಜಿ.ಶಶಿಧರ-481, ಮಹದೇವಪ್ಪ-533 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ಮಮತ-526, ಸುಜಾತ ವಿ-507 ಮತಗಳನ್ನು ಪಡೆದಿದ್ದಾರೆ.
ಎಸ್.ಟಿ.ಮೀಸಲು ಕ್ಷೇತ್ರದಿಂದ ತಿಪ್ಪೇರುದ್ರಪ್ಪ ಡಿ-474, ಎಸ್ಸಿ.ಮೀಸಲು ಕ್ಷೇತ್ರದಿಂದ ಮಹದೇವಪ್ಪ ಎಸ್-533 ಮತಗಳನ್ನು ಗಿಟ್ಟಿಸಿಕೊಂಡು ಜಯಶಾಲಿಗಳಾಗಿದ್ದಾರೆ.
ಬಿ.ಸಿ.ಎಂ.ಬಿ. ಯಿಂದ ಯೋಗೇಶ್ ಹೆಚ್, ಬಿ.ಸಿ.ಎಂ.ಎ. ಯಿಂದ ಆರ್.ಕರಿಯಪ್ಪ, ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಬಸವರಾಜಪ್ಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಡಿಗ ವಿಶ್ವನಾಥ, ಜಿ.ಆರ್.ಪ್ರಭು, ರಾಜಪ್ಪ ಜೆ, ಲೋಹಿತ್ ಹೆಚ್. ಆರ್.ಸತೀಶ, ಎಸ್.ಪಿ.ಸತೀಶ, ನಾಗರಾಜ, ಬಿ.ಕರಿಯಪ್ಪ, ದೇವಿರಮ್ಮ, ವಸಂತಮ್ಮ ಇವರುಗಳು ಮಾಧುರಿ ಗಿರೀಶ್ ಗುಂಪಿನ ವಿರುದ್ದ ಸ್ಪರ್ಧಿಸಿ ಸೋತಿದ್ದಾರೆ.
ಪ್ರತಿಷ್ಠಿತ ಚುನಾವಣೆಯಲ್ಲಿ ಒಟ್ಟು 1001 ಮತಗಳಿದ್ದು, 930 ಮತಗಳು ಚಲಾವಣೆಯಾಗಿವೆ.