Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಭ್ರಷ್ಠಚಾರ ಮಾಡಿದ್ದರೆ ದಾಖಲೆ ನೀಡಿ : ಸಿದ್ದೇಶ್

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿ. 06 : ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪರವರು ಈ ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ದಿ ಕಾರ್ಯವನ್ನು ಮಾಡಿದ್ದಾರೆ. ಅವರು ಯಾವುದೇ ಭ್ರಷ್ಠಾಚಾರವನ್ನು ಮಾಡಿಲ್ಲ. ಸದಾ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಚಿಂತನೆಯನ್ನು ನಡೆಸುತ್ತಾರೆ. ಇಂತಹರನ್ನು ಪಕ್ಷದಲ್ಲಿ ಇಲ್ಲದ ವ್ಯಕ್ತಿ ಇವರು ಅನ್ಯಾಯ ಮಾಡಿದ್ದಾರೆ, ಭ್ರಷ್ಠಾಚಾರ ಮಾಡಿದ್ದಾರೆ ಕ್ಷೇತ್ರವನ್ನು ಅಭಿವೃದ್ದಿ ಮಾಡಿಲ್ಲ ಎಂದು ಆರೋಪಿಸಿ ಇವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದು ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್ ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2008 ವಿಧಾನಸಭಾ ಚುನಾವಣೆಯಿಂದ ಹಿಡಿದು 2024ರ ಚುನಾವಣೆಯವರೆಗೂ ಚಂದ್ರಪ್ಪರವರ ಮೇಲೆ ಆರೋಪ ಮಾಡಿದ ಜಯಸಿಂಹ ಪಕ್ಷದ ಪರವಾಗಲಿ, ಚಂದ್ರಪ್ಪರವರ ಪರವಾಗಲಿ ಚುನಾವಣೆಯಲ್ಲಿ ಕೆಲಸವನ್ನು ಮಾಡಿಲ್ಲ. ಇದರ ಬದಲಿ ಚಂದ್ರಪ್ಪರವರ ವಿರುದ್ದ ಬೇರೆಯವರನ್ನು ನಿಲ್ಲಿಸಿ ಅವರು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದಾರೆ. ಇವರು ಮೂಲತಃ ಬಿಜೆಪಿಯವರು ಎನ್ನುತ್ತಿದ್ದಾರೆ. ಆದರೆ ಒಂದು ದಿನವೂ ಸಹಾ ಪಕ್ಷದ ಕಚೇರಿಗೆ ಬಂದಿಲ್ಲ. ಸಭೆಯಲ್ಲಿ ಭಾಗವಹಿಸಿಲ್ಲ, ಪಕ್ಷದ ಪರವಾಗಿ ಪ್ರಚಾರವನ್ನು ಮಾಡಿಲ್ಲ, ಇಂತಹ ವ್ಯಕ್ತಿ ಒಬ್ಬ ಶಾಸಕರ ಮೇಲೆ ಆರೋಪ ಮಾಡಿರುವುದು ಸರಿಯಲ್ಲ. ಶಾಸಕರು ಅಕ್ರಮ ಭ್ರಷ್ಠಚಾರ ಮಾಡಿದ್ದರೆ ಸರಿಯಾದ ರೀತಿಯಲ್ಲಿ ದಾಖಲೆಯನ್ನು ನೀಡಲಿ ಬರೀ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

ಜಯಸಿಂಹ ಮತ್ತು ಅವರ ತಂಡ ನಾವು ಮೂಲತಃ ಬಿಜೆಪಿಯವರು ಎನ್ನುತ್ತಿದ್ದಾರೆ. ಆದರೆ ಮೊನ್ನೆ ನಡೆದ ಪಂ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ನಂತರ ಕಾಂಗ್ರೆಸ್ ಮುಖಂಡರು ಮಾಜಿ ಸಚಿವರಾದ ಅಂಜನೇಯರವರ ಬಳಿ ಹೋಗಿ ಕಾಂಗ್ರೆಸ್ ಶಾಲು ಹಾಕಿ ನಾವು ನಿಮ್ಮ ಪಕ್ಷದವರು ಎಂದಿದ್ದಾರೆ. ತದ ನಂತರ ಸಂಸದರಾದ ಗೋವಿಂದ ಕಾರಜೋಳ ರವರ ಬಳಿ ಹೋಗಿ ಬಿಜೆಪಿ ಶಾಲು ಹಾಕಿ ನಾವು ನಿಮ್ಮ ಪಕ್ಷವನ್ನು ಸೇರುತ್ತೇವೆ ಎಂದಿದ್ದಾರೆ. ಈ ರೀತಿಯಾದ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಇದಕ್ಕೆ ತಕ್ಕ ಸಾಕ್ಷಿ ನಮ್ಮ ಬಳಿ ಇದೆ ಎಂದು ಸಿದ್ದೇಶ್ ಹೇಳಿದ್ದಾರೆ.

ನಮ್ಮಲ್ಲಿ ಇರುವ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ, ಅವರೆಲ್ಲ ಜೊಳ್ಳು ಕಾಳುಗಳಾಗಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದ್ದೇಯೆ ಆವರ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಬೇಕು. ಆದರೆ ಇವರು ಬೇರೆ ಅಭ್ಯರ್ಥಿಯನ್ನು ಹುಟ್ಟು ಹಾಕಿ ಚುನಾವಣೆಯಲ್ಲಿ ನಿಲ್ಲಿಸಿ ಅವರು ಸೋಲುವಂತೆ ಮಾಡಿದ್ದಾರೆ ಇದು ಪಕ್ಷ ವಿರೋಧಿ ಚಟುವಟಿಕೆಯಾಗಿದೆ, ಚಂದ್ರಪ್ಪ ರವರು ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಮೇಲೆ ವಿವಿಧ ರೀತಿಯ ಅಭಿವದ್ದಿ ಕಾರ್ಯವನ್ನು ಮಾಡಿದ್ದಾರೆ, ಚೆಕ್ ಡ್ಯಾಂಗಳಿಗೆ ಕೆರೆಗಳಿಗೆ ನೀರನ್ನು ತುಂಬಿಸಿದ್ದಾರೆ, ವಿವಿಧ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಇದೆಲ್ಲಾ ಅಭೀವೃದ್ದಿ ಅಲ್ಲವಾ ಎಂದು ಪ್ರಶ್ನಿಸಿದ ಸಿದ್ದೇಶ್, ಚಂದ್ರಪ್ಪರವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಹೇಳಲು ಅವರಿಗೆ ಯಾವ ನೈತಿಕತೆ ಇಲ್ಲ ಅವರು ಪಕ್ಷಕ್ಕೆ ಬರುವುದಾದರೆ ನಮ್ಮ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್ ಕೇಳಬೇಕು. ಆಗ ಪಕ್ಷದ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲಾಗುವುದೆಂದು ತಿಳಿಸಿದರು.

ನಮ್ಮ ಪಕ್ಷದ ಕಾರ್ಯಕರ್ತರಿಗೆ ಈ ವಿಷಯದ ಬಗ್ಗೆ ಶಾಂತಿಯಿಂದ ಇರುವಂತೆ ಹೇಳಲಾಗಿದೆ. ಇವರು ರೊಚ್ಚಿಗೆದ್ದರೆ ಅವರು ಉಳಿಯುವುದಿಲ್ಲ. ಈ ವಿಷಯದ ಬಗ್ಗೆ ಸುಮ್ಮನೆ ಇದ್ದರೆ ಓಳ್ಳೇಯದು ಇಲ್ಲವಾದರೆ ನಾವು ಸಹಾ ಅವರ ಜಾತಕವನ್ನು ಬಿಚ್ಚಿ ಇಡಬೇಕಾಗುತ್ತದೆ ಎಂದು ಸಿದ್ದೇಶ್ ಎಚ್ಚರಿಸಿದರು.

ಗೋಷ್ಟಿಯಲ್ಲಿ ಜಿ.ಪಂ. ಮಾಜಿ ಸದಸ್ಯ ತಿಪ್ಪೇಸ್ವಾಮಿ, ಪುರಸಭೆಯ ಮಾಜಿ ಅಧ್ಯಕ್ಷ ಆಶೋಕ್, ತಾ.ಪಂ. ಮಾಜಿ ಸದಸ್ಯ ಶಿವು, ಎಪಿಎಂಸಿ, ಮಾಜಿ ಅಧ್ಯಕ್ಷ ಅಂಕಪ್ಪ, ಪುರಸಭಾ ಸದಸ್ಯರಾದ ಬಸವರಾಜ್ ಯಾದವ್, ಮುರುಗೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಓಬಿಸಿ ಅಧ್ಯಕ್ಷ ಗೀರೀಶ್, ನಗರಾಧ್ಯಕ್ಷ ಪ್ರವೀಣ್, ಮಂಡಲ ಉಪಾಧ್ಯಕ್ಷ ರುದ್ರೇಗೌಡ, ಯುವ ಮೋರ್ಚಾ ಅಧ್ಯಕ್ಷ ಅರುಣ್,ಜಯನಾಯ್ಕ, ರುದ್ರೇಶ್, ಬದರಿನಾಯ್ಕ್, ಚಂದ್ರನಾಯ್ಕ್, ಧೃವಕುಮಾರ್, ವಿಜಯ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ಧಾರಣೆ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.12 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಗುರುವಾರ, ಡಿಸೆಂಬರ್. 12 )ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ. ಹತ್ತಿ ಕನಿಷ್ಟ

ಪಂಚಮಸಾಲಿ ಹೋರಾಟದಲ್ಲಿ ಹರಿಹರ ಪೀಠ ಸೈಲೆಂಟ್ ಯಾಕೆ : ವಚನಾನಂದ ಶ್ರೀಗಳು ಹೇಳಿದ್ದೇನು..?

ದಾವಣಗೆರೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೋಸಲಾತಿ ಬೇಕೆಂದು ಒತ್ತಾಯಿಸಿ ಬೃಹತ್ ಮಟ್ಟದ ಪ್ರತಿಭಟನೆಯನ್ನೇ ಸಮುದಾಯದವರು ನಡೆಸುತ್ತಿದ್ದಾರೆ. ಹೀಗಿರುವಾಗ ಹರಿಹರ ಪೀಠ ಮಾತ್ರ ಸೈಲೆಂಟ್ ಆಗಿದೆ. ಹೋರಾಟಕ್ಕೆ ಮುಂದಾಗಿಲ್ಲ. ಈ ಬಗ್ಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ

ಒಂದೇ ಒಂದು ಕರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ ಹಾಕ್ತಾರೆ.. ಆದರೆ : ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು..?

ಬೆಳಗಾವಿ: ಚಳಿಗಾಲದ ಅಧಿವೇಶನದ ನಡುವೆ ಬೃಹತ್ ಮಟ್ಟದ ಪ್ರತುಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಲಾಠಿ ಚಾರ್ಜ್ ನಡೆದಿದ್ದು, ಎಫ್ಐಆರ್ ಕೂಡ ದಾಖಲಾಗಿದೆ‌. ಇದನ್ನು ವಿರೋಧಿಸಿ ಇಂದು ಕೂಡ ಪಂಚಮಸಾಲಿ ಸಮುದಾಯದವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ

error: Content is protected !!