ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

1 Min Read

ಸುದ್ದಿಒನ್, ಹೊಳಲ್ಕೆರೆ, ಆಗಸ್ಟ್.15 ‌: ತಾಲ್ಲೂಕಿನ ಅರೇಹಳ್ಳಿಯ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಚ್.ಎಸ್. ಮಂಜುನಾಥ್ ಡೆಪ್ಯೂಟಿ ಕಮಿಷನರ್ ಆಪ್ ಕಮರ್ಷಿಯಲ್ ಟ್ಯಾಕ್ಸಸ್ ದಾವಣಗೆರೆ, ಇವರು ಮಾತನಾಡಿ ಕಾರ್ಯಕ್ರಮದಲ್ಲಿ ಧ್ವಜಾರೋಣವನ್ನು ನೆರವೇರಿಸಿ ಮಕ್ಕಳಿಗೆ ಮಕ್ಕಳಿಗೆ ಸ್ವಾತಂತ್ರ್ಯವು ಅನೇಕ ಮಹನೀಯರ ಬಲಿದಾನದಿಂದ ಸಿಕ್ಕಂತ ದೊಡ್ಡ ಫಲವಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಹಿತೋಕ್ತಿಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದು ಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆ. ಎಸ್. ಮಂಜುನಾಥ್ ರವರು ಮಾತನಾಡಿ,   ಸ್ವಾತಂತ್ರ್ಯವು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು 1947ರ ಆಗಸ್ಟ್ 14ರ ವರೆಗೆ ಬ್ರಿಟಿಷರು ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ನಮ್ಮನ್ನು ಹೀನಕೃತ್ಯಗಳಲ್ಲಿ ಭಾಗವಹಿಸುವಂತೆ ಮಾಡಿ ಭಾರತೀಯರನ್ನು ಶೋಚನೀಯ ಸ್ಥಿತಿಗೆ ತಂದು ನಿಲ್ಲಿಸಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ರಕ್ತ ಬಲಿದಾನದ ಮೂಲಕ  ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿಗಳಾದಂತ ಜೆ. ಎಸ್. ವಸಂತ್ ರವರು ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯು ಅನೇಕ ಮಹನೀಯರ ಹೋರಾಟದ ಫಲವಾಗಿ ನಮಗೆ ದೊರಕಿದೆ. ಇದರ ಹಿಂದಿನ ಉದ್ದೇಶ ಕೇವಲ ವ್ಯಾಪಾರಕ್ಕೆಂದು ಬಂದಂತಹ ಯುರೋಪಿನ ರಾಷ್ಟ್ರಗಳು ನಮ್ಮಲ್ಲಿರುವಂತಹ ಒಗ್ಗಟ್ಟಿನ ಕೊರತೆ ಕೋಮು ಸೌಹಾರ್ದತೆ ಇವೆಲ್ಲವನ್ನೂ ಮನಗಂಡಂತ ಯುರೋಪಿನ ರಾಷ್ಟ್ರಗಳು ನಮ್ಮನ್ನು ಸುಮಾರು 400 ವರ್ಷಗಳ ಕಾಲ ಆಳ್ವಿಕೆ ಮಾಡಿದರು ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲರಾದ ಶ್ರೀಯುತರು ಜಿ. ವೇಣುಗೋಪಾಲ್ ರವರು ಮಕ್ಕಳಲ್ಲಿ ಮೌಲ್ಯಯುತ ಶಿಕ್ಷಣವನ್ನು ನೀಡುವುದರ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾದದ್ದು ಎಂದು ಎಲ್ಲರಿಗೂ ತಿಳಿಹೇಳಿದರು.

ಈ ಸಂದರ್ಭದಲ್ಲಿ ಬಿ.ಎಸ್. ಹರೀಶ್ ಬಾಬು ಹಾಗೂ ಶ್ರೀಮತಿ ಛಾಯಾ ಮಂಜುನಾಥ್, ಎಂ ಜೆ ನಾಗರಾಜ್ ಮತ್ತು ಶಾಲೆಯ  ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *