ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಡಿ. 21 : ಹೊಳಲ್ಕೆರೆ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ವಿಕಾಸ ಸೌಧದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಸಮಾರಂಭವೂ ಡಿ. 25 ರ ಬುಧವಾರ ನಡೆಯಲಿದೆ ಎಂದು ಶಾಸಕರಾದ ಎಂ.ಚಂದ್ರಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪುರಸಭೆಯವತಿಯಿಂದ ಈ ಸಂಘಕ್ಕೆ ಜಾಗವನ್ನು ನೀಡಲಾಗಿತ್ತು ಇದರಲ್ಲಿ ಇವರು ನೂತನವಾದ ಕಟ್ಟಡವನ್ನು ಅವರ ಸ್ವಂತ ಹಣದಲ್ಲಿ ಸರ್ಕಾರದ ಸಹಾಯವಿಲ್ಲದೆ ನಿರ್ಮಾಣ ಮಾಡಿಕೊಂಡಿದ್ದಾರೆ. ಹೊಳಲ್ಕೆರೆಯಲ್ಲಿ ಸಂಘದವರು ತಾಲ್ಲೂಕಿನಲ್ಲಿ 4518 ಸ್ವಸಹಯ ಸಂಘಗಳನ್ನು ರಚನೆ ಮಾಡಿ ಇದರಲ್ಲಿ 40265 ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಇವರ ಉಳಿತಾಯದ ಇದುವರೆವಿಗೆ 24.46 ಕೋಟಿ ಆಗಿದೆ, ಉತ್ತಮವಾದ ನಿರ್ವಹಣೆಯನ್ನು ಮಾಡಿದ ಸಂಘಗಳಿಗೆ ಬ್ಯಾಂಕ್‍ಗಳಿಂದ 204.16 ಕೋಟಿ ರೂ. ಸಾಲವನ್ನು ಕೊಡಿಸಲಾಗಿದೆ. ಉತ್ತಮವಾದ ಆರ್ಥಿಕ ವ್ಯವಹಾರವನ್ನು ನಡೆಸಿದ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಗುತ್ತಿದ್ದು ಇದುವರೆವಿಗೂ ಎರಡು ಬಾರಿ ಲಾಭಾಂಶವನ್ನು ವಿತರಣೆ ಮಾಡಲಾಗಿದೆ ಈಗ ಮೂರನೇ ಭಾರಿ ಲಾಭಾಂಶವನ್ನು ವಿತರಣೆ ಮಾಡಲು ಸಂಘ ಮುಂದಾಗಿದ್ದು 2703 ಸಂಘಗಳಿಗೆ 11 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಇದರೊಂದಿಗೆ ಸಂಘದ ಸದಸ್ಯ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ 1788 ವಿದ್ಯಾರ್ಥಿಗಳಿಗೆ 1.60 ಕೋಟಿ ಶಿಷ್ಯ ವೇತನವನ್ನು ನೀಡಲಾಗಿದೆ. 5 ಬಡ ಕುಟುಂಬಗಳಿಗೆ ವಾತ್ಸಾಲ್ಯ ಮನೆ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ. 75 ಜನರಿಗೆ ತಲಾ ಮಾಸಿಕವಾಗಿ 1000 ರೂ.ಗಳನ್ನು ದುರ್ಬಲ ವರ್ಗದವರಿಗೆ ನೀಡಲಾಗುತ್ತಿದೆ. 239 ವಿಕಲ ಚೇತನರಿಗೆ ಅಗತ್ಯವಾದ ಉಪಕರಣಗಳನ್ನು ನೀಡಲಾಗಿದೆ. ತಾಲ್ಲೂಕಿನಲ್ಲಿ 8 ಕೆರೆಗಳ ಹೂಳನ್ನು 55.99 ಲಕ್ಷ ರೂ,ಮೊತ್ತದಲ್ಲಿ ತೆಗೆಸಲಾಗಿದೆ ಎಂದರು.
ದಿನಾಂಕ 25.12.2024 ರಂದು ಬುಧವಾರ ಬೆಳಗ್ಗೆ 10:00 ಗಂಟೆಗೆ ಡಾ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ಲಾಭಾಂಶ ಪಡೆದ ಸ್ವ-ಸಹಾಯ ಸಂಘಗಳಿಗೆ ವಿತರಣೆ ಮಾಡುವರುನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಸಂಸದರಾದ ಗೋವಿಂದ ಎಮ್ ಕಾರಜೋಳ, ಇವರು ಕೆರೆ ಸಮಿತಿಯವರಿಗೆ ಹಸ್ತಾಂತರಿಸಲಿರುವರು. ನಿರಾಶ್ರಿತ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು, ಇದರ ಹಸ್ತಾಂತರವನ್ನು ಮಾಜಿ ಸಚಿವರಾದ ಹೆಚ್. ಆಂಜನೇಯ, ಫಲಾನುಭವಿಗಳಿಗೆ ಮಾಡುವರು.
ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆಯನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್. ಇವರು ನಡೆಸಲಿರುವರು. ಗ್ರಾಮಾಭಿವೃದ್ಧಿ ಯೋಜನೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಆಶಯ ಭಾಷಣವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್ ಇವರು ಮಾಡಲಿರುವರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ವೆಂಕಟೇಶ್, ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷರಾದ ನಾಗರತ್ನ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಸುಮಿತ್ರಕ್ಕ ಸೇರಿದಂತೆ ಪುರಸಭೆಯ ಸದಸ್ಯರು ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭೀವೃದ್ದಿ ಬಿ.ಸಿ.ಟ್ರಸ್ಟ್ ನ ನಿರ್ದೇಶಕರಾದ ದಿನೇಶ್ ಪೂಜಾರ್, ಯೋಜಣಾಧಿಕಾರಿಗಳಾದ ಸುರೇಂಧ್ರ ಆಚಾರ್, ಪ್ರಬಾಕರ್ ವಸಂತ್, ಮುಖಂಡರಾದ ರುದ್ರಪ್ಪ, ಪುರಸಭೆಯ ಮಾಜಿ ಅಧ್ಯಕ್ಷರಾದ ಅಶೋಕ್ ಗ್ರಾಮ ಪಂ ಮಾಜಿ ಅಧ್ಯಕ್ಷರಾದ ಡಿ,ಸಿ.ಮೋಹನ್, ರಮೇಶ್ ಗೌಡ್ರ ದುಮ್ಮಿ, ಸರಸ್ವತಿ, ಅಶೋಕ್ ಗಂಗಾಧರಪ್ಪ, ದೇವರಾಜ್ ಸಾಸಲು ಸೇರಿದಂತೆ ಇತರರು ಭಾಗವಹಿಸಿದ್ದರು.