ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ.13 : ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಹೊಳಲ್ಕೆರೆ ಟೌನ್ ಮಂಜುನಾಥ ಸ್ಕೂಲ್ ರೋಡ್‍ನಲ್ಲಿನ ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜಾತ್ರೋತ್ಸವವೂ ಏ. 14 ಮತ್ತು 15 ರಂದು ನಡೆಯಲಿದೆ ಎಂದು ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷರು ಎಮ್ ಸತೀಶ್ ಕುಮಾರ್ ತಿಳಿಸಿದ್ದಾರೆ.

ಜಾತ್ರೋತ್ಸವದ ಅಂಗವಾಗಿ ಏ. 14 ರಂದು ಅಮ್ಮನವರು ಮಧು ಒಣಗಿತ್ತಿ ಕಾರ್ಯಕ್ರಮ, ಏ. 15 ರಂದು ಬೆಳಿಗ್ಗೆ 6:30 ರಿಂದ ಗಂಗಾ ಪೂಜೆ ಪೂಜೆಯ ನಂತರ 7:30ಕ್ಕೆ ಕೆಂಡಾರ್ಚನೆ ಇರುತ್ತದೆ ನಂತರ ಭಕ್ತಾದಿಗಳಿಗೆಲ್ಲ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಗೋವಿಂದ ಕಾರಜೋಳ ರವರು ಆಗಮಿಸಲಿದ್ದಾರೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ

ಹೆಚ್ಚಿನ ಮಾಹಿತಿಗಾಗಿ 98444 66691, 8147298002, 8861931601 ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ಶ್ರೀ ಹರಿಮತಿ ಚೌಡೇಶ್ವರಿ ಅಮ್ಮನವರ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷರು ಎಮ್ ಸತೀಶ್ ಕುಮಾರ್ ತಿಳಿಸಿದ್ದಾರೆ.

