Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಳಲ್ಕೆರೆ, ಚನ್ನಗಿರಿ ಮಾರುಕಟ್ಟೆಯಲ್ಲಿ ದಿಢೀರನೆ ಅಡಿಕೆ ಬೆಲೆ ಕುಸಿತ..!

Facebook
Twitter
Telegram
WhatsApp

ಚಿತ್ರದುರ್ಗ: ಕಳೆದ ಕೆಲವು ತಿಂಗಳಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ಯಾಕಂದ್ರೆ ನಿರೀಕ್ಷೆಯಂತೆ ಅಡಿಕೆ ಧಾರಣೆ50 ಸಾವಿರಕ್ಕೆ ಏರಿಕೆಯಾಗಿತ್ತು. ಆದರೆ ಈಗ ಮಳೆಗಾಲ ಶುರುವಾಗಿರುವ ಹೊತ್ತಲ್ಲೇ ಇದ್ದಕ್ಕಿದ್ದ ಹಾಗೇ ಅಡಿಕೆ ಧಾರಣೆಯಲ್ಲಿ ಬೆಲೆ ಕುಸಿತವಾಗಿದೆ. ಇದು ರೈತರ ಬೇಸರಕ್ಕೆ, ನೋವಿಗೆ ಕಾರಣವಾಗಿದೆ.

ವಿವಿಧ ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ಹತ್ತು ಸಾವಿರ ಕುಸಿತ ಕಂಡಿದೆ. ಹೊಳಲ್ಕೆರೆಯಲ್ಲಿ ಕ್ವಿಂಟಾಲ್‌ ರಾಶಿ ಅಡಿಕೆ ಧಾರಣೆ ಕನಿಷ್ಠ ₹50,519 ಇದ್ದರೆ ಗರಿಷ್ಠ 52,819 ರೂಪಾಯಿ ಆಗಿತ್ತು. ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 47,512 ರೂಪಾಯಿ ಇದ್ದರೆ ಗರಿಷ್ಠ 53,700 ರೂಪಾಯಿ ಆಗಿತ್ತು. ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಠ 28,989 ರೂಪಾಯಿ ಇದ್ದರೆ ಗರುಷ್ಠ 52,219 ರೂಪಾಯಿಗೆ ಮಾರಾಟವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ 30,008-53,009 ರೂಪಾಯಿ ದರಕ್ಕೆ ಮಾರಾಟವಾಗಿದೆ. ಸರಕು ಅಡಿಕೆ ಧಾರಣೆ ಕನಿಷ್ಠ 54,069 ಇದ್ದರೆ ಗರಿಷ್ಠ 79,896 ಆಗಿತ್ತು.

ಶಿವಮೊಗ್ಗ, ಚಿತ್ರದುರ್ಗ ಭಾಗದಲ್ಲಿ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಬೆಲೆಯಲ್ಲಿ ದಿಢೀರನೇ ಕುಸಿತ ಕಂಡಿರುವುದು ರೈತರಿಗೆ ಬೇಸರ ತರಿಸಿದೆ. ಮುಂಗಾರು ಮಳೆ ಈಗ ಶುರುವಾಗಿದೆ. ಆದರೆ ಬರಗಾಲದ ಸಮಯದಲ್ಲಿ ಅಡಿಕೆ ಮರಗಳನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗೋ ಹೀಗೋ ನೀರು ಬಿಟ್ಟು ಕಾಪಾಡಿಕೊಂಡಿದ್ದಾರೆ. ಇಂಥ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಮಾರುಕಟ್ಟೆಯಲ್ಲೂ ಅಡಿಕೆ ಬೆಲೆ 50 ಸಾವಿರಕ್ಕೂ ಹೆಚ್ಚು ತಲುಪಿತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೇ ಹತ್ತು ಸಾವಿರದ ತನಕ ಕುಸಿದಿರುವುದು ರೈತರಿಗೆ ಆಘಾತ ಉಂಟಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಎಲ್ಲರಿಗೂ ಸಮಾಜವನ್ನು ಪರಿವರ್ತಿಸುವ ಹೊಣೆಗಾರಿಕೆಯಿದೆ : ಪ್ರೊ.ಕಾಳೇಗೌಡ ನಾಗವಾರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜೂ.16 : ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಜವಾಬ್ದಾರಿ ಬರಹಗಾರನ ಮೇಲಿದೆ ಎಂದು ಖ್ಯಾತ ಸಾಹಿತಿ ಹಾಗೂ

ಆರ್ಯ ವೈಶ್ಯ ಸಮುದಾಯದ ವಧು ವರಾನ್ವೇಷಣೆಗಾಗಿ ಋಣಾನುಬಂಧ ಕಾರ್ಯಕ್ರಮ : ಎಲ್. ಈ. ಶ್ರೀನಿವಾಸ್‍ಬಾಬು

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜೂ.16 : ಕಾಲ ಬದಲಾದಂತೆ ವೃತ್ತಿ ಮನಸ್ಸುಗಳು ಬದಲಾಗುತ್ತಿವೆ ಎಂದು ಕರ್ನಾಟಕ ಆರ್ಯವೈಶ್ಯ ಆವೋಪ.ಗಳ ಒಕ್ಕೂಟದ

Petrol, Diesel Prices: ವಾಹನ ಸವಾರರಿಗೆ ಶಾಕ್ :  ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆ

ಸುದ್ದಿಒನ್, ಬೆಂಗಳೂರು : ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಈ ಹಿಂದೆ 100 ರೂಪಾಯಿಗಿಂತಲೂ ಹೆಚ್ಚಾಗಿದ್ದ ಪೆಟ್ರೋಲ್ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಚುನಾವಣೆಗೂ ಮೊದಲು ನಿರ್ಧಾರ ಕೈಗೊಂಡಿತ್ತು.

error: Content is protected !!