ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 25 : ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ ಬ್ರಹ್ಮಪುರ(ದಗ್ಗೆ) ದಲ್ಲಿ ಫೆ.26 ರಿಂದ ಮಾ.1 ರವರೆಗೆ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಬುಧವಾರ ರಾತ್ರಿ ಹತ್ತು ಗಂಟೆಯಿಂದ ಬಸವೇಶ್ವರಸ್ವಾಮಿಯ ಮಹಾಶಿವರಾತ್ರಿ ಜಾಗರಣೆ ಮತ್ತು ಅಭಿಷೇಕ 101 ಪೂಜೆಗಳು.

27 ರಂದು ಬೆಳಿಗ್ಗೆ ಐದು ಗಂಟೆಯಿಂದ ಗಂಗಾಪೂಜೆ, ಧ್ವಜಾರೋಹಣ, ಕಂಕಣಧಾರಣೆ ಮತ್ತು ಉತ್ಸವಗಳು.
28 ರಂದು ಸ್ವಾಮಿಯ ಗುಗ್ಗಳ ಸೇವೆ. ಬೆಳಿಗ್ಗೆ 10-30 ಕ್ಕೆ ಕೆಂಡದಾರ್ಚನೆ ಮತ್ತು ಕತ್ತಿ ಪವಾಡ. ಸಂಜೆ ಆರು ಗಂಟೆಗೆ ಧೂಳು ಉತ್ಸವ, ರಾತ್ರಿ 8 ಗಂಟೆಯಿಂದ ಹೂವಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಮಧ್ಯಾಹ್ನ 12-30 ರಿಂದ ಅನ್ನಸಂತರ್ಪಣೆ.
ಮಾ.1 ರಂದು ಮಧ್ಯಾಹ್ನ 12 ಗಂಟೆಗೆ ಓಕಳಿ, 1 ಗಂಟೆಗೆ ಶನಿ ಮಹಾತ್ಮೆ ಪುರಾಣ. ರಾತ್ರಿ 9 ಕ್ಕೆ ಕಾಶಿಕಡಲೆ. ನಂತರ ರಸಮಂಜರಿ ಕಾರ್ಯಕ್ರಮವಿರುತ್ತದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಸ್ಥಾನ ಜಾತ್ರಾ ಸಮಿತಿ ಅಧ್ಯಕ್ಷ ಮಿಲ್ಟ್ರಿ ನಾಗರಾಜ್ ಮನವಿ ಮಾಡಿದ್ದಾರೆ.

