ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಹೊಳಲ್ಕೆರೆ, ಮಾರ್ಚ್. 01 : ತಾಲ್ಲೂಕಿನ ತಾಳ್ಯ ಹೋಬಳಿಯ ಬ್ರಹ್ಮಪುರ(ದಗ್ಗೆ)ದಲ್ಲಿ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಫೆ.26 ರಿಂದ ಆರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಅಭಿಷೇಕ, 101 ಪೂಜೆಗಳು, ಗಂಗಾಪೂಜೆ, ಧ್ವಜಾರೋಹಣ, ಕಂಕಣಧಾರಣೆ, ಉತ್ಸವಗಳು, ಕೆಂಡದಾರ್ಚನೆ, ಕತ್ತಿ ಪವಾಡ, ಧೂಳು ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನೆರವೇರಿತು.
ಶನಿವಾರ ಓಕಳಿ, ಶನಿ ಮಹಾತ್ಮೆ ಪುರಾಣ, ಕಾಶಿಕಡಲೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ಬ್ರಹ್ಮಪುರ ಹಾಗೂ ಸುತ್ತಮುತ್ತಲಿನ ಅಪಾರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿ ಸಮರ್ಪಿಸಿದರು.

