ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ, ಸುದ್ದಿಒನ್ ನ್ಯೂಸ್, (ಏ.20) :
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಏಪ್ರಿಲ್ 20 ರಂದು ಹೊಳಲ್ಕೆರೆ ಮತಕ್ಷೇತ್ರದಲ್ಲಿ 13 ನಾಮಪತ್ರ ಸಲ್ಲಿಕೆಯಾಗಿವೆ.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಹೆಚ್.ಆಂಜನೇಯ,
ಸಮಾಜವಾದಿ ಪಕ್ಷದಿಂದ ಪಿ.ಎಸ್.ಜಯಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಂ.ಎಸ್.ರಘುವೀರ ವರ್ಮ,
ಬಹುಜನ ಸಮಾಜ ಪಕ್ಷದಿಂದ ಕೆ.ಎನ್.ದೊಡ್ಡಹೊಟ್ಟೆಪ್ಪ,
ಜೈ ಮಹಾ ಭಾರತ ಪಕ್ಷದಿಂದ ಪಕ್ರಾಶ್.ಹೆಚ್, ಪಕ್ಷೇತರ ಅಭ್ಯರ್ಥಿಗಳಾಗಿ ಆಂಜನೇಯ, ಅಪ್ಪಾಜಿ ಎ ಚನ್ನಬಸವಣ್ಣನವರು, ಹನುಮಂತಪ್ಪ ಡಿ, ಮಂಜುನಾಥ ಸ್ವಾಮಿ ಟಿ, ಮಹೇಶ್ ಕುಮಾರ್.ಎಮ್.ಪಿ, ಟಿ.ತಿಪ್ಪೇಸ್ವಾಮಿ,
ನಿರಂಜನ.ಎ.ಡಿ ಸೇರಿದಂತೆ ಹನುಮಂತಪ್ಪ.ಬಿ ನಾಮತ್ರ ಸಲ್ಲಿಸಿದ್ದಾರೆ.
ಇದುವರೆವಿಗೂ ಒಟ್ಟು 19 ಅಭ್ಯರ್ಥಿಗಳು 23 ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಎಂ.ಚಂದ್ರಪ್ಪ 2, ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ ಹೆಚ್.ಆಂಜನೇಯ 2, ಪಕ್ಷೇತರ ಅಭ್ಯರ್ಥಿಯಾಗಿ ಡಾ.ಎಲ್.ಜಯಸಿಂಹ 2, ಸಮಾಜವಾದಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಎಸ್.ಜಯಪ್ಪ 2 ಸೇರಿದಂತೆ, ಉತ್ತಮ ಪ್ರಜಾಕೀಯ ಪಕ್ಷದ ರಾಜು ಈ, ಆಮ್ ಆದ್ಮಿ ಪಕ್ಷದ ಮಹಾಂತೇಶ್.ಸಿ.ಯು, ಜ್ಯಾತ್ಯಾತೀತ ಜನತಾ ದಳದ ಎಸ್.ಆರ್.ಇಂದ್ರಜಿತ್ ನಾಯ್ಕ್ , ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಎಂ.ಎಸ್.ರಘುವೀರ ವರ್ಮ, ಬಹುಜನ ಸಮಾಜ ಪಕ್ಷದ ಕೆ.ಎನ್.ದೊಡ್ಡಹೊಟ್ಟೆಪ್ಪ, ಜೈ ಮಹಾ ಭಾರತ ಪಕ್ಷದಿಂದ ಪಕ್ರಾಶ್.ಹೆಚ್, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಈ.ಉಮಾಪತಿ, ಆಂಜನೇಯ, ಅಪ್ಪಾಜಿ ಎ ಚನ್ನಬಸವಣ್ಣನವರು, ಹನುಮಂತಪ್ಪ ಡಿ, ಮಂಜುನಾಥ ಸ್ವಾಮಿ ಟಿ, ಮಹೇಶ್ ಕುಮಾರ್.ಎಮ್.ಪಿ, ಟಿ.ತಿಪ್ಪೇಸ್ವಾಮಿ, ನಿರಂಜನ.ಎ.ಡಿ ಸೇರಿದಂತೆ ಹನುಮಂತಪ್ಪ.ಬಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.