ಬೆಂಗಳೂರು: ಇತ್ತೀಚೆಗೆ ಸ್ವಾತಂತ್ರ್ಯದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಅಲ್ಲ ಎಂಬ ಹೇಳಿಕೆಯನ್ನ ನೀಡಿದ್ದರು. ಇದೀಗ ಆ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ತುಂಬಾ ದೊಡ್ಡವರು. ತಮ್ಮ ಜ್ಞಾನ ಭಂಡಾರದಲ್ಲಿ ಇರುವುದನ್ನು ಹೇಳುತ್ತಾ ಇದ್ದಾರೆ. ನಾನ್ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಲಿ. ಸ್ವತಂತ್ರ ತಂದಿದ್ದು ಯಾರು ಅಂತ ಅವರ ತಂದೆ ಹೇಳ್ತಾರೆ. ಅವರಿಗೆ ಬೋಧನೆ ಮಾಡಲು ನಾವೂ ತಯಾರಿಲ್ಲ ಎಂದಿದ್ದಾರೆ.
ಇದೇ ವೇಳೆ ಸದನದಲ್ಲಿ ಅಹೋರಾತ್ರಿ ಧರಣಿ ಬಗ್ಗೆ ಮಾತನಾಡಿ, ಕಲಾಪವನ್ನ ನಾವೆಲ್ಲಿ ವ್ಯರ್ಥ ಮಾಡುತ್ತಿದ್ದೀವಿ. ಈ ಹಿಂದೆ ಸದನದಲ್ಲಿ ಬಿಎಸ್ವೈ ಕೂಡ ಪ್ರತಿಭಟನೆ ಮಾಡಿದ್ದರು. ಅವರು ಬೆಳಗಾವಿಯಲ್ಲಿ ಧರಣಿ ಮಾಡಲಿಲ್ವಾ..? ಯಡಿಯೂರಪ್ಪ, ಬೊಮ್ಮಾಯಿ ಧರಣಿ ಮಾಡಿದ್ದರು. ಆಗ ಅವರು ಮಾಡಿದ್ದರು ಈಗ ನಾವೂ ಮಾಡುತ್ತಿದ್ದೇವೆ. ವಿಪಕ್ಷವಾಗಿ ನಮ್ಮ ಹೋರಾಟ ಮಾಡಲೇಬೇಕು ಎಂದಿದ್ದಾರೆ.