ಹಿರಿಯೂರು, ಮಾರ್ಚ್. 28 : ಕುಡಿತ ಅನ್ನೋದು ತಾನೂ ಏನು ಮಾಡ್ತಾ ಇದ್ದೀನಿ ಅನ್ನೋದನ್ನೇ ಮರೆಸಿ ಬಿಡುತ್ತದೆ. ಇಲ್ಲೊಬ್ಬ ಕುಡಿದು ತನ್ನ ತಾಯಿಯ ಪ್ರಾಣವನ್ನೇ ತೆಗೆದಿದ್ದಾನೆ. ಈ ಘಟನೆ ನಡೆದಿರೋದು ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದಲ್ಲಿ. ಕುಡಿದ ಮತ್ತಿನಲ್ಲಿದ್ದ ನೀಚ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಘಟನೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.

ಕುಡಿತವನ್ನ ಅಭ್ಯಾಸ ಮಾಡಿಕೊಂಡಿದ್ದ ಚಿತ್ರಲಿಂಗ ಎಂಬಾತನೇ ಇಂಥ ಕೃತ್ಯ ಮಾಡಿರುವುದು. ಈ ಚಿತ್ರಲಿಂಗನಿಗೆ ಈಗ 40 ವರ್ಷ ವಯಸ್ಸು. ಈತನಿಂದ ಕೊಲೆಯಾದ ದುರ್ದೈವ ತಾಯಿ, ಗಂಗಮ್ಮ. ಮೃತ ಮಹಿಳೆಗೆ 65 ವರ್ಷ. ಚಿತ್ರಲಿಂಗ ಯಾವಾಗಲೂ ಮನೆಗೆ ಕುಡಿದು ಬರುತ್ತಿದ್ದ. ಸುಮ್ಮ ಸುಮ್ಮನೆ ಜಗಳ ಮಾಡುತ್ತಿದ್ದ.ಇಂದು ಕೂಡ ಕುಡಿದು ಜಗಳ ಮಾಡಿದ್ದಾನೆ.

ಈ ವೇಳೆ ಮತ್ತಿನಲ್ಲಿ ತಾಯಿಯನ್ನೇ ಕೊಂದಿದ್ದಾನೆ. ಈ ಘಟನೆ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸರು ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಿತ್ರಲಿಂಗನನ್ನು ಪೊಲೀಸರು ಬಂಧಿಸಿದ್ದಾರೆ.


