ಹಿರಿಯೂರು ಗ್ರಾಮಾಂತರ ಪೊಲೀಸರಿಂದ ನಾಲ್ವರು ಅಂತರ್ ರಾಜ್ಯ ದರೋಡಕೋರರ ಬಂಧನ

ಸುದ್ದಿಒನ್, ಚಿತ್ರದುರ್ಗ,(ಜು.08) : ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ಹತ್ತಿರ ಸರ್ವಿಸ್ ರಸ್ತೆಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿ ಟೈರ್ ಮತ್ತು ಡಿಸೇಲ್ ಕಳ್ಳತನ ಮಾಡಿದ್ದ ನಾಲ್ವರು ಅಂತರ್ ರಾಜ್ಯ ದರೋಡಕೋರರನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ದ್ಯಾನೇಶ್ವರ, ಬಾಲಾಜಿ, ರಾಹುಲ್‌ ಮತ್ತು ರುಹಿದಾಸ್ ಬಂಧಿತರು.

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣಗಳು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣ, ಕೊಪ್ಪಳದ ಬೇವೂರ ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿದ್ದು,
ಪ್ರಕರಣಗಳಿಗೆ ಸಂಬಂಧಪಟ್ಟ 2 ಲಕ್ಷ ಮೌಲ್ಯದ 10 ಟೈರುಗಳನ್ನು ಮತ್ತು 7 ಸಾವಿರ ರೂಪಾಯಿ ಮೌಲ್ಯದ 80 ಲೀಟರ್
ಡೀಸೆಲನ್ನು, 10 ಲಕ್ಷ ರೂಪಾಯಿ ಮೌಲ್ಯದ ಲಾರಿಯನ್ನು ಹಾಗೂ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಕ್ಕೆ
ಸಂಬಂಧಪಟ್ಟಂತಹ 54 ಸಾವಿರ ರೂಪಾಯಿ ಬೆಲೆಯ 02 ಟೈರುಗಳನ್ನು ಒಟ್ಟಾರೆಯಾಗಿ 12,61,000/- ರೂಪಾಯಿ ಮೌಲ್ಯದ
ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 05 ರಂದು ಬೆಳಗಿನ ಜಾವ ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ಹತ್ತಿರ ಸರ್ವಿಸ್ ರಸ್ತೆಯಲ್ಲಿ ಲಾರಿ ಚಾಲಕನಾದ ರಾಕೇಶ್ ಲವಶಿಯ ಮೇಲೆ
(ಸುಮಾರು 34 ವರ್ಷ, ಬಾವಡಿ ಖೇಡ ಗ್ರಾಮ, ಪಚೋರಿ ತಾಲ್ಲೂಕು, ರಾಜಘಡ ಜಿಲ್ಲೆ, ಮಧ್ಯಪ್ರದೇಶ ರಾಜ್ಯ) ಬಂಧಿತ ಆರೋಪಿಗಳು ಹಲ್ಲೆ ಮಾಡಿ ಕೈಕಾಲುಗಳನ್ನು ಕಟ್ಟಿಹಾಕಿ ಒಂದು ಹೊಲದಲ್ಲಿ ಬಿಸಾಕಿ ಅವನು
ಚಲಾಯಿಸುತ್ತಿದ್ದ ಲಾರಿಯ 10 ಹೊಸ ಟೈರುಗಳನ್ನು ಮತ್ತು ಲಾರಿಯಲ್ಲಿರುವ 80 ಲೀಟರ್ ಡೀಸೆಲನ್ನು ಮತ್ತು ಆತನ
ಮೊಬೈಲನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತು.

ಕೆ.ಪರಶುರಾಮ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ, ಎಸ್.ಜೆ ಕುಮಾರಸ್ವಾಮಿ ಐ.ಪಿ.ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಶ್ರೀಮತಿ ಚೈತ್ರ ಡಿ.ವೈ.ಎಸ್.ಪಿ, ಹಿರಿಯೂರು ಉಪವಿಭಾಗ ರವರ ನೇತೃತ್ವದಲ್ಲಿ ಹಿರಿಯೂರು ಗ್ರಾಮಾಂತರ
ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಈ. ಕಾಳಿಕೃಷ್ಣ, ಪಿ.ಎಸ್.ಐ. ಸಚಿನ ಬಿರಾದಾರ, ಎ.ಎಸ್.ಐ. ಪ್ರಭುಲಿಂಗಣ್ಣ  ಮತ್ತು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಮಹಮ್ಮದ್ ಹನೀಫ್ ಹಡಗಲಿ, ಸಿದ್ದಪ್ಪ, ಗೌರೀಶ್, ತಿಪ್ಪಾಭೋವಿ, ಅನಿಲ್ ಕುಮಾರ್, ಹರೀಶ್ ಕುಮಾರ್, ಪ್ರವೀಣ್ ಕುಮಾರ್, ಮಂಜುನಾಥ್, ಪರಮೇಶಿ, ಜಾಫರ್ ಸಾಧಿಕ್, ಪ್ರಸನ್ನ, ಈರಣ್ಣ ಸಾಲೋಡಗಿ, ಎಪಿಸಿ ಹರ್ಷ ರವರುಗಳನ್ನೊಳಗೊಂಡ ತಂಡವು ಪ್ರಕರಣ ದಾಖಲಾದ 24 ಗಂಟೆಯ ಒಳಗೆ ಪ್ರಕರಣವನ್ನು ಭೇದಿಸಿದ ಹಿರಿಯೂರು ಗ್ರಾಮಾಂತರ ಠಾಣೆಯ
ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪರುಶುರಾಮ ರವರು ಶ್ಲಾಘಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!