ಹಿರಿಯೂರು ಗ್ರಾಮಾಂತರ ಪೊಲೀಸರಿಂದ 8 ಮಂದಿ ಮನೆಗಳ್ಳರ ಬಂಧನ :  12.75 ಲಕ್ಷದ ಬೆಳ್ಳಿ, ಬಂಗಾರ ವಶ

1 Min Read

ಸುದ್ದಿಒನ್, ಚಿತ್ರದುರ್ಗ, (ಜು.26) : ಹಿರಿಯೂರು ಸೇರಿದಂತೆ ವಿವಿಧೆಡೆ ನಡೆದ ಮನೆಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 8 ಮಂದಿ ಆರೋಪಗಳನ್ನು ಹಿರಿಯೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಒಟ್ಟು 04 ಪ್ರಕರಣಗಳು ಮತ್ತು ಹಿರಿಯೂರು ನಗರ ಠಾಣೆಯ 01 ಮನೆಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹೇಶ, ಬಾಲು, ರವಿಕುಮಾರ, ಸಲೀಂ ಬೇಗ್, ಅನ್ವರ್ ಭಾಷ, ಸಂತೋಷ ಕುಮಾರ್, ವಿನಾಯಕ ಚಾರಿ ಮತ್ತು ರಾಘವೇಂದ್ರ ಚಾರ್ ಬಂಧಿತ 8 ಮಂದಿ ಆರೋಪಿಗಳು. ಬಂಧಿತರಿಂದ ಒಟ್ಟಾರೆಯಾಗಿ 12 ಲಕ್ಷದ 75 ಸಾವಿರ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

ಹಿರಿಯೂರು ತಾಲ್ಲೂಕಿನ ಬಗ್ಗನಾಡು ಗ್ರಾಮ, ಆದಿವಾಲ ಫಾರಂ ಗ್ರಾಮದಲ್ಲಿ ಎರಡು ಬಾರಿ, ಮದ್ದೇರುಹಳ್ಳದ ಸಮೀಪದ ಮನೆ ಮತ್ತು ಹಿರಿಯೂರು ನಗರದಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ ಕುಮಾರಸ್ವಾಮಿ ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಚೈತ್ರ ಡಿ.ವೈ.ಎಸ್.ಪಿ, ಹಿರಿಯೂರು ಉಪವಿಭಾಗ ರವರ ನೇತೃತ್ವದಲ್ಲಿ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಈ. ಕಾಳಿಕೃಷ್ಣ, ಪಿ.ಎಸ್.ಐ. ಸಚಿನ ಬಿರಾದಾರ, ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಸಿದ್ದಪ್ಪ, ಮಹಮ್ಮದ್ ಹನೀಫ್ ಹಡಗಲಿ, ಪರಮೇಶ, ಪ್ರವೀಣ್ ಕುಮಾರ, ಪ್ರಸನ್ನ ಟಿ, ಶಶಿಧರ ಟಿ.ಎಸ್, ಜೀಪ್ ಚಾಲಕ ಹರ್ಷ, ಹಿರಿಯೂರು ನಗರ ಪೆÇಲೀಸ್ ಠಾಣೆ ದೇವೇಂದ್ರಪ್ಪ, ಸಿದ್ದಲಿಂಗೇಶ್ವರ ಹಾಗೂ ಇತರೆ ಠಾಣಾ ಸಿಬ್ಬಂದಿಯವರನ್ನೊಳಗೊಂಡ ತಂಡದವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಅವರಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.

ಹಿರಿಯೂರು ಗ್ರಾಮಾಂತರ ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಶ್ಲಾಘಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *