ಹಿರಿಯೂರು : ಕುರಿಗಾಹಿಗಳಿಗೆ ನಾಗರೀಕ ಬಂದೂಕು ತರಬೇತಿ ನೀಡಿ

1 Min Read

ಸುದ್ದಿಒನ್, ಹಿರಿಯೂರು, ಮಾರ್ಚ್. 28  : ತಾಲೂಕಿನಲ್ಲಿರುವ ಎಲ್ಲಾ ಕುರಿಗಾಹಿಗಳಿಗೆ ನಾಗರೀಕ ಬಂದೂಕು ತರಬೇತಿ ನೀಡುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ತಹಶೀಲ್ದಾರ್ ಸಿ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿ ತಾಲೂಕಿನ ಗ್ರಾಮೀಣ ಪ್ರದೇಶಗಳ ಕುರಿಗಾಹಿಗಳು ತಮ್ಮ ಕುರಿಗಾಹಿಗಳನ್ನು ಅರಣ್ಯ ಪ್ರದೇಶಗಳಲ್ಲಿ, ಬೆಟ್ಟ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಕಾಡು ಪ್ರಾಣಿಗಳು, ಕಳ್ಳ ಕಾಕರಿಂದ ತಪ್ಪಿಸಿಕೊಳ್ಳಲು ಹಾಗೂ ಆತ್ಮರಕ್ಷಣೆಗಾಗಿ ಬಂದೂಕು ಅತ್ಯವಶ್ಯಕವಾಗಿದೆ. ಜೊತೆಗೆ ದೀಪಾವಳಿ ಸಮಯದಲ್ಲಿ ಮೇವಿಗಾಗಿ ಹಿರಿಯೂರನಿಂದ ತರೀಕೆರೆ, ಹಾಸನ, ಚಿಕ್ಕಮಗಳೂರು ಇನ್ನೀತರ ಕಡೆಗಳಿಗೆ ವಲಸೆ ಹೋಗಿದ್ದ ಸಂಧರ್ಭದಲ್ಲಿ ಹೆಚ್ಚಾಗಿ ಕುರಿ ಕಳ್ಳತನ ನಡೆಯುತ್ತಿವೆ. ಇಂತಹವುಗಳನ್ನು ನಡೆಯಲು ಹಾಗೂ ಕಳ್ಳರಿಂದ ತಮ್ಮ ಜೀವ ರಕ್ಷೆಣೆಗಾಗಿ ಕುರಿಗಾಯಿಗಳಿಗೆ ಬಂದೂಕು ಅಗತ್ಯವಿದೆ. ಆದ್ದರಿಂದ ತರಬೇತಿ ನೀಡಿ ಅವರಿಗೆ ಬಂದೂಕು ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ವಿಶ್ವನಾಥ್, ತಾಪಂ ಮಾಜಿ ಸದಸ್ಯ ಹಾಲಪ್ಪ ಮಟ್ಟಿ, ತಮ್ಮಣ್ಣ, ವಕೀಲ ಮಂಜುನಾಥ್, ರಂಗಸ್ವಾಮಿ, ಶಿವಕುಮಾರ್, ಸ್ಟೂಡಿಯೋ ಗೋವಿಂದಪ್ಪ, ರಂಗಪ್ಪ , ರಾಮು, ಕೆಟಿ. ಹನುಮಂತ, ಯೋಗೇಶ್, ಶಿವು, ರಾಕೇಶ್, ರಾಜಣ್ಣ, ಕೃಷ್ಣಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *