ಹಿರಿಯೂರು | ತಾಲ್ಲೂಕಿನ ಈ ಊರುಗಳಲ್ಲಿ ನವೆಂಬರ್ 22 ರಂದು ವಿದ್ಯುತ್ ವ್ಯತ್ಯಯ

1 Min Read

 

ಚಿತ್ರದುರ್ಗ. ನ.21:ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ವ್ಯಾಪ್ತಿಯ ಹಿರಿಯೂರು ತಾಲ್ಲೂಕಿನ 220 ಕೆ.ವಿ ಎಸ್.ಆರ್.ಎಸ್ ಹಿಂಡಸಕಟ್ಟೆ ಮತ್ತು ಭಜರಂಗಿ 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನ.22ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಹಿಂಡಸಕಟ್ಟೆ ವಿದ್ಯುತ್ ಕೇಂದ್ರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಮಾರ್ಗಗಳು : ಗೋಕುಲ ನಗರ, ಅರಿಶಿನಗುಂಡಿ, ಹಾಲ್‌ಮಾದೇನಹಳ್ಳಿ, ಶೇಷಪ್ಪನಹಳ್ಳಿ, ಯಲ್ಲದಕೆರೆ, ಬಡಗೊಲ್ಲರಹಟ್ಟಿ, ಚಿಗಲಿಕಟ್ಟಿ, ವೀರವ್ವನಾಗತಿಹಳ್ಳಿ, ನಾಯಕರಕೊಟ್ಟಿಗೆ, ಸೀಗೇಹಟ್ಟಿ, ಪಿಲಾಜನಹಳ್ಳಿ, ಕಾತ್ರಿಕೇನಹಳ್ಳಿ, ಪರಮೇಶನಹಳ್ಳಿ, ಉಡುವಳ್ಳಿ, ರಂಗಾಪುರ, ಮಾಳಗೊಂಡನಹಳ್ಳಿ, ಮಾದೇನಹಳ್ಳಿ ಮುಸ್ಲಿಂ ಕಾಲೋನಿ, ಗೌಡನಹಳ್ಳಿ, ದಿಂಡಾವರ, ಲಾಯರ್‌ದಾಸರಹಳ್ಳಿ, ಮಾವಿನಮಡು, ಎ.ವಿ ಕೊಟ್ಟಿಗೆ, ಗೌನಹಳ್ಳಿ, ಗೂಗುದ್ದು, ಭೂತಯ್ಯನಹಟ್ಟಿ, ಭರಂಗಿರಿ, ಕುರುಬರಹಳ್ಳಿ, ಕಕ್ಕಯ್ಯನಹಟ್ಟಿ, ವಿ ವಿ ಪುರ, ತಳವಾರಹಟ್ಟಿ, ಅಮ್ಮನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು, ರೈತರು, ಗ್ರಾಹಕರು ಸಹಕರಿಸಬೇಕು ಎಂದು ಹಿರಿಯೂರು ಉಪವಿಭಾಗದ ಬೆಸ್ಕಾಂ ಸಹಾಯಕ ಇಂಜಿನಿಯರ್ ಹೆಚ್.ಪೀರ್‌ಸಾಬ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *