ಸುದ್ದಿಒನ್, ಹಿರಿಯೂರು, ಅಕ್ಟೋಬರ್. 25 : ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಭರಮಗಿರಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ 26/10/2025 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಪೂರೈಕೆಯಲ್ಲಿ ಉಂಟಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಪೀರ್ ಸಾಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭರಮಕೇರಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಫ್ 10 ಐಮಂಗಳ ವಾಟರ್ ಸಪ್ಲೈ 11 ಕೆ ಬಿ ಮಾರ್ಗದ ಎಕ್ಸ್ಪ್ರೆಸ್ ಕಾಮಗಾರಿ ನಿರ್ವಾಣ ಪ್ರಯುಕ್ತ ಬರಮಗಿರಿ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಈ ಕೆಳಕಂಡ 11 ಕೆ.ವಿ ಮಾರ್ಗಗಳಿಗೆ ಸದರಿ ದಿನದಂದು ಬೆಳಿಗ್ಗೆ 10 ರಿಂದ ಸಂಜೆ ಆರರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಎಫ್ -1 ಕುರುಬರಹಳ್ಳಿ, ಎಫ್-3 ಮಾರಿಕಣಿವೆ, ಎನ್.ವೈಜೆ, ಎಫ್-4 ವಿವಿ ಪುರ, ವಾಟರ್ ಸಪ್ಲೈ, ಎಫ್ -10 ಐಮಂಗಲ ವಾಟರ್ ಸಪ್ಲೈ, ಎಫ್-11 ಕೂನಿಕೆರೆ ಕಾವಲ್, ಎಫ್ -12 ತಳವಾರಹಟ್ಟಿ, ಎಫ್-13 ವೈ.ಎನ್. ಹಳ್ಳಿ ಹಾಗೂ ವಿದ್ಯುತ್ ಅಡಚಣೆ ಆಗುವ ಹಳ್ಳಿಗಳಾದ ಕುರುಬರಹಳ್ಳಿ, ಅಮ್ಮನಹಟ್ಟಿ, ವಿವಿಪುರ, ತಳವಾರಹಟ್ಟಿ, ಬೆಳಗಟ್ಟ , ಕೂನಿಕೆರೆ ಕವಲ್, ಎರಕೆನಾಗೇನಹಳ್ಳಿ, ಮೇಕೆನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಹಾಗೂ ಸಾರ್ವಜನಿಕರು ಸಹಕರಿಸಬೇಕೇಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

