ಹಿರಿಯೂರು | ಅಡಿಕೆ ಮಾರುಕಟ್ಟೆ ವ್ಯಾಪಾರಕ್ಕೆ ಪರವಾನಗಿ ನೀಡಿ

2 Min Read

ಹಿರಿಯೂರು, ಸೆಪ್ಟೆಂಬರ್. 03  : ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯಾಪಾರ ಮಾಡಲು ಪರವಾನಗಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೃಷಿ ಮಾರುಕಟ್ಟೆ ಅಧಿಕಾರಿ ಶ್ರೀ ಹರ್ಷ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ ತಾಲೂಕಿನ ವಾಣಿವಿಲಾಸ ಜಲಾಶಯ ಭರ್ತಿಯಾಗಿದ್ದು, ಜೊತೆಗೆ ತಾಲೂಕಿನ ಕೆರೆಗಳಿಗೆ ನೀರು ಹರಿಸುತ್ತಿರುವುದರಿಂದ ತಾಲೂಕಿನಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯಲು ರೈತರು ಮುಂದಾಗಿರುತ್ತಾರೆ. ಅಲ್ಲದೆ ಈಗಾಗಲೇ ಬಹುತೇಕ ಮಂದಿ ಅಡಿ ಬೆಳೆಯುತ್ತಿದ್ದಾರೆ. ತಾಲ್ಲೂಕಿನಲ್ಲಿ ಅಡಿಕೆ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದಿರುವುದರಿಂದ ಕೂಡಲೇ ಎಪಿಎಂಸಿ ಆವರಣದಲ್ಲಿ ಅಡಿಕೆ ಮಾರಾಟ ಮಾಡಲು ಮಾರುಕಟ್ಟೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಅತಿ ಅಡಿಕೆ ರಾಶಿ ಅಡಿಕೆ ಚಾಲಿ ಅಡಿಕೆ ಮುಂತಾದ ಅಡಿಕೆಗಳನ್ನ ಮಾರಾಟ ಮಾಡಲು ವರ್ತಕರಿಗೆ ಪ್ರಸಕ್ತ ಸಾಲಿನಲ್ಲಿ ಪರವಾನಿಗೆ ನೀಡಬೇಕು ತಾಲೂಕಿನಲ್ಲಿ ಮಂಡಿ ಇಲ್ಲದೆ ಇರುವುದರಿಂದ ಅಡಿಕೆ ವೈವಾಟಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಅಡಿಕೆ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು ಎಂದರು.

ತಾಲೂಕಿನಲ್ಲಿ ಚೆಂಡು ಹೂವು ಬೆಳೆಗಾರರು ಎದ್ದು ಮಾರಾಟ ಮಾಡಲು ಮಾರುಕಟ್ಟೆ ಇಲ್ಲದೆ ಇರುವುದರಿಂದ ನಗರದ ಪ್ರಮುಖ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದು, ಮಳೆಗಾಲದಲ್ಲಿ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಬೇಕು. ಇದಲ್ಲದೆ ಪ್ರತಿ ಶನಿವಾರ ನಡೆಯುವ ಕುರಿ ಸಂತೆ ಮಾರುಕಟ್ಟೆ ಮೈದಾನದಲ್ಲಿ ಮಾರಾಟ ಮಾಡಲು ಬಂದಿರುವ ಕುರಿಗಳಿಗೆ ಕುಡಿಯಲು ನೀರು, ಶೆಡ್ ವ್ಯವಸ್ಥೆ ಇರುವುದಿಲ್ಲ. ವಾಹನ ಹಾಗೂ ಕುರಿಗಿಷ್ಟು ಅಂತ ವಸೂಲಿ ಮಾಡುವ ಶುಲ್ಕವನ್ನು ಎಪಿಎಂಸಿಗೆ ತೆಗೆದುಕೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿನ ತಿಂಗಳೊಳಗೆ ಕಾರ್ಯಗತಗೊಳಿಸಬೇಕು. ಇಲ್ಲವಾದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಕೆಟಿ. ತಿಪ್ಪೇಸ್ವಾಮಿ ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಸಣ್ಣ ತಿಮ್ಮಣ್ಣ, ಜಗನ್ನಾಥ್, ವೀರಣ್ಣಗೌಡ, ಜಯಣ್ಣ, ವಿರೂಪಾಕ್ಷಪ್ಪ, ಅರಳಿಕೆರೆ ತಿಪ್ಪೇಸ್ವಾಮಿ, ಮೀಸೆ ಗೌಡಪ್ಪ, ರಾಮಣ್ಣ, ಬಾಲಕೃಷ್ಣ, ತಿಮ್ಮಾರೆಡ್ಡಿ, ರಂಗಜ್ಜ, ಜಗದೀಶ್, ನಾಗರಾಜಪ್ಪ, ಶಹಜಾನ್, ಮಂಜುನಾಥ್, ತಿಪ್ಪೇಸ್ವಾಮಿ, ಈರಣ್ಣ, ರಮೇಶ್, ರಾಜಪ್ಪ ಸೇರಿದಂತೆ ಮತ್ತಿತರದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks