ಹಿರಿಯೂರು, ಜುಲೈ. 23 : ತಾಲೂಕಿನ ಇಕ್ಕನೂರು ಗ್ರಾಮದ ಮುದ್ದೇನಹಳ್ಳಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಬುಧವಾರ ಸಿಪಿಐ ಗುಡ್ಡಪ್ಪ ಮಾರ್ಗದರ್ಶನದಲ್ಲಿ ಅಬ್ಬಿನ ಹೊಳೆ ಪಿಎಸ್‌ಐ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ, ಅವರಿಂದ ಸುಮಾರು ರೂ.34,580 ನಗದು ವಶಪಡಿಸಿಕೊಂಡು ಸುಮಾರು 15ಮಂದಿಯನ್ನು ಬಂಧಿಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.





