ಸುದ್ದಿಒನ್, ಹಿರಿಯೂರು, ಡಿಸೆಂಬರ್. 06 : ತಾಲೂಕಿನ ಆಲೂರು ಗ್ರಾಮದ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದವರ ಮೇಲೆ ಗ್ರಾಮಾoತರ ಠಾಣೆ ಪಿಎಸ್ಐ ಮಹೇಶ್ ಗೌಡ ನೇತೃತ್ವದಲ್ಲಿ 6 ಮಂದಿಯನ್ನು ಬಂಧಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಂಧಿತರಿಂದ 20,100 ರೂ ನಗದು ಹಾಗೂ ಇಸ್ಪೀಟ್ ಗರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯೂರು ಗ್ರಾಮಾoತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ದಿನಗಳ ಹಿಂದಷ್ಟೇ ಇದೇ ಗ್ರಾಮದಲ್ಲಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದ ಘಟನೆ ಕೂಡ ನಡೆದಿತ್ತು.


