ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 05 : ವಿವಾಹವಾಗಿ ಗಂಡ ಮಕ್ಕಳೊಂದಿಗೆ ಸಂಸಾರ ಮಾಡಿಕೊಂಡಿದ್ದ ಸೌಮ್ಯಳನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿರುವ ಹಿರೇಗುಂಟನೂರು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥನಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ವಿಧಿಸಿ ಸೌಮ್ಯಗಳಿಗೆ ರಕ್ಷಣೆ ನೀಡುವಂತೆ ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆಯ ಜಿಲ್ಲಾಧ್ಕಕ್ಷ ಅನಂತಮೂರ್ತಿನಾಯ್ಕ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೌಮ್ಯಳ ಮನೆಗೆ ಬಂದು ಹೋಗುತ್ತಿದ್ದ ಮಂಜುನಾಥ ಕೊನೆಗೆ ಗಂಡನಿಂದ ಬೇರ್ಪಡಿಸಿ ತನ್ನ ಜೊತೆಯಿಟ್ಟುಕೊಂಡು ಸಂಸಾರ ಮಾಡುತ್ತಿದ್ದನಲ್ಲದೆ ಲಕ್ಷಗಟ್ಟಲೆ ಹಣ ಚಿನ್ನದ ಒಡವೆಗಳನ್ನು ಕಬಳಿಸಿಕೊಂಡು ಈಗ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ಸೌಮ್ಯಳನ್ನು ಈ ರೀತಿ ಶೋಷಣೆ ಮಾಡುತ್ತಿರುವುದು ಕಾನೂನು ದೃಷ್ಟಿಯಲ್ಲಿ ಅಪರಾಧ. ಹಾಗಾಗಿ ಮಂನಾಥನ ಮೇಲೆ ಕ್ರಮ ಕೈಗೊಳ್ಳುವಂತೆ ಅನಂತಮೂರ್ತಿನಾಯ್ಕ ಆಗ್ರಹಿಸಿದರು.
ಅಖಿಲ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಕಾಂಗ್ರೆಸ್‍ನ ಸುಧಾ, ಕೋದಂಡರಾಮ, ಪವಿತ್ರ, ಫರ್ವಿನ್, ರೈತ ಸಂಘದ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಡಿ.ಹೆಚ್.ನಾಗರಾಜಕಟ್ಟೆ, ಸೌಮ್ಯ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.