ಮುಂಬೈ: ಮಹಾರಾಷ್ಟ್ರದಲ್ಲೂ ಹಿಂದುತ್ವದ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಬಿಜೆಪಿ ಸಂಸದೆ ನವನೀತ್ ರಾಣಾ ಇದೇ ವಿಚಾರವಾಗಿ ಸುದ್ದಿಯಾಗಿದ್ದಾರೆ. ಇದೀಗ ಶಿವಸೇನೆ ಹಿಂದುತ್ವದ ಬಗ್ಗೆ ಸ್ಪಷ್ಟನೆ ನೀಡಿದ್ದು, ಹಿಂದುತ್ವ ಅನ್ನೋದು ಸಂಸ್ಕೃತಿ. ಅದು ಅವ್ಯವಸ್ಥೆಯಲ್ಲ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದಲ್ಲಿ ಅದು ಉತ್ತಮವಾಗಿಯೇ ಇದೆ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.
ಇನ್ನು ಸಿಎಂ ಖಾಸಗಿ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವ ಬಗ್ಗೆ ಸಂಸದೆ ನವನೀತ್ ರಾಣಾ ಹಾಗೂ ಪತಿ ರವಿ ರಾಣಾ ಕರೆ ನೀಡಿದ್ದನ್ನು ಖಂಡಿಸಿರುವ ಶಿವಸೇನೆ, ಹನುಮಾನ್ ಚಾಲೀಸಾ ಪಠಿಸಲಿ ಬೇಡ ಎಂಬುವವರು ಯಾರು. ರಾಣಾ ದಂಪತಿ ತಮ್ಮ ಪ್ರಚಾರಕ್ಕೋಸ್ಕರ, ಲಾಭಿಗೋಸ್ಕರ ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹನುಮಾನ್ ಚಾಲೀಸಾ ಪಠಿಸಲು ಯಾವುದೇ ಒತ್ತಡವಿಲ್ಲ. ಆದರೆ ಸಿಎಂ ಮನೆ ಮುಂದೆ ಪಠಿಸಬೇಕೆಂಬ ಒತ್ತಡ ಯಾಕೆ ಎಂಸು ಪ್ರಶ್ನಿಸಿದೆ.
ಇನ್ನು ನವನೀತ್ ರಾಣಾ ಲೋಕಸಭೆ ಚುಬಾವಣೆಗೆ ಸ್ಪರ್ಧಿಸುವಾಗ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದರು. ಇಂಥ ನಕಲಿ ವ್ಯಕ್ತಿಗಳ ಹೆಗಲ ಮೇಲೆ ಕೂತು ಬಿಜೆಪಿ ಹನುಮಾನ್ ಚಾಲೀಸಾ ಪಠಿಸಲು ಬಯಸಿದರೆ ಇದು ರಾಮ ಮತ್ತು ಹನುಮನಿಗೆ ಮಾಡಿದ ಅವಮಾನವಾಗುತ್ತದೆ. ಬಿಜೆಪಿ ಅನುಸರಿಸುತ್ತಿರುವ ಅವ್ಯವಸ್ಥೆಯನ್ನು ಬೆಂಬಲಿಸಲಾಗುವುದಿಲ್ಲ ಎಂದು ಶಿವಸೇನೆ ತಿಳಿಸಿದೆ.