ಮದುವೆ ವಿಚಾರಕ್ಕೆ ಹಿಂದೂಗಳನ್ನು ಟೀಕಿಸಿದ್ದ ಶೌಕತ್ ಅಲಿ ಮೇಲೆ ಕೇಸ್ ದಾಖಲು..!

ಲಕ್ನೊ: ಹಿಂದೂಗಳ ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುತ್ತಾರೆ ಎಂದು ಹೇಳಿದ್ದ AIMIM ಅಧ್ಯಕ್ಷ ಶೌಕತ್ ಅಲಿ ಮೇಲೆ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಅಂಭಾಲ್ ನಲ್ಲಿ ನಡೆದ ರ್ಯಾಲಿಯಲ್ಲಿ ಹಿಂದೂಗಳ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. 832 ವರ್ಷಗಳ ಕಾಲ ಮುಸ್ಲಿಮರು ಹಿಂದೂಗಳ ಮೇಲೆ ಆಳ್ವಿಕೆ ನಡೆಸಿದರು. ಆಗ ಹಿಂದೂಗಳು ಮುಸ್ಲಿಂ ದೊರೆಗಳ ಮುಂದೆ ಕೈ ಜೋಡಿಸಿ, ತಲೆ ಬಾಗಿ ನಿಲ್ಲುತ್ತಿದ್ದರು.

ಮುಸ್ಲಿಮರು ಎರಡು ಬಾರಿ ಮದುವೆಯಾಗುತ್ತಾರೆ. ಇಬ್ಬರನ್ನೂ ಗೌರವದಿಂದ ನೋಡಿಕೊಳ್ಳುತ್ತಾರೆ ಆದರೆ ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರು ಪ್ರೇಯಸಿಯರನ್ನು ಇಟ್ಟುಕೊಳ್ಳುತ್ತಾರೆ ಎಂದು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆ.153-A, 295-A ಸೆಕ್ಷನ್ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

ಮುಸ್ಲಿಮರು ಎರೆಉ ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದುತ್ತೀರಾ ಎಂದು ಹೇಳುತ್ತೀರಾ. ನಾವೂ ಮದುವೆಯಾದ ಹೆಂಡತಿಯರಿಗೆ ಗೌರವ ಕೊಡುತ್ತೀವಿ. ಆದರೆ ನೀವೂ ಒಂದು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತೀರಿ. ಒಬ್ಬರಿಗೂ ಗೌರವ ಕೊಡುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *