ಬೆಂಗಳೂರು: ನಿಪ್ಪಾಣಿಯಲ್ಲಿ ನಡೆದ ಬಂಧುತ್ವ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಹಿಂದು ಪದ ನಮ್ಮದಲ್ಲ ಎಂದು ಹೇಳಿದ ಮಾತು ವಿವಾದ, ಚರ್ಚೆ ಹುಟ್ಟು ಹಾಕಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸತೀಶ್ ಜಾರಕಿಹೊಳಿ ಕ್ಷಮೆಯಾಚಿಸಿದ್ದಾರೆ.
ಬಂಧುತ್ವ ವೇದಿಕೆಯಲ್ಲಿ ಮನೆ ಮನೆಗೂ ಬುದ್ಧ, ಬಸವ, ಅಂಬೇಡ್ಕರ್ ಕಾರ್ಯಕ್ರಮದಲ್ಲಿ ನಾನು ಮಾತನಾಡಿದ ಮಾತು ವಿವಾದಕ್ಕೆ ಈಡಾಗಿದೆ. ಅಲ್ಲದೆ ಅದನ್ನು ತಿರುಚಿ ಅಫ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಬಾರದು. ಈ ಹಿನ್ನಲೆಯಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಯಾರುಗಾದರೂ ನೋವಾಗಿದ್ದರೆ ನನ್ನನ್ನು ಕ್ಷಮಿಸಿ. ಹಾಗೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿವೆ. ತೇಜೋವಧೆ, ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಮೇಲಿನ ಎಲ್ಲಾ ವಿಚಾರವನ್ನು, ಪರಿಸ್ಥಿತಿಯನ್ನು ಪರಿಶೀಲಿಸಿ, ಅವಾಂತರ ಸೃಷ್ಟಿಸಿದವರ ಮೇಲೆ ತನಿಖೆ ನಡೆಸಿ ಎಂದು ಸತೀಶ್ ಜಾರಕಿಹೊಳಿ ತಿಳಿದಿದ್ದಾರೆ.