Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

hindu temple : ದೇವಸ್ಥಾನಕ್ಕೆ ಯಾಕೆ ಹೋಗುತ್ತೀರಿ ? ಮತ್ತು ದೇವಸ್ಥಾನದಲ್ಲಿ ಗಂಟೆ ಯಾಕೆ ಬಾರಿಸುತ್ತಾರೆ ಗೊತ್ತಾ?

Facebook
Twitter
Telegram
WhatsApp

ಸುದ್ದಿಒನ್ ವೆಬ್ ಡೆಸ್ಕ್

ನಮ್ಮಲ್ಲಿ ಹೆಚ್ಚಿನವರು ಪ್ರತಿನಿತ್ಯ ದೇವಾಲಯಗಳಿಗೆ ಹೋಗುತ್ತಾರೆ. ದೇವಸ್ಥಾನದಲ್ಲಿ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಇದಲ್ಲದೆ, ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕುವುದರಿಂದ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿ ಸ್ವಲ್ಪ ಸಮಯ ಅಲ್ಲಿ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ನಂಬುತ್ತಾರೆ.

ಇಷ್ಟೇ ಅಲ್ಲದೇ ದೇವಸ್ಥಾನಕ್ಕೆ ಹೋಗುವವರಿಗೆಲ್ಲ ಒಂದಿಷ್ಟು ವಿಷಯ ಗೊತ್ತಿರಲೇಬೇಕು. ದೇವಸ್ಥಾನದಲ್ಲಿ ಗಂಟೆ ಯಾಕೆ ಬಾರಿಸುತ್ತಾರೆ ? ಯಾಕೆ ಪ್ರದಕ್ಷಿಣೆ ಹಾಕುತ್ತಾರೆ ? ಯಾವ ಯಾವ ನಿಯಮಗಳು ಪಾಲಿಸಬೇಕು ಎಂಬ ಕುತೂಹಲಕಾರಿ ಸಂಗತಿಗಳನ್ನು ಈಗ ತಿಳಿಯೋಣ….

ದೇವಸ್ಥಾನದಲ್ಲಿ ಶಿಷ್ಟಾಚಾರ ಪಾಲಿಸಬೇಕು….

ಹೆಚ್ಚಿನ ಹಿಂದೂ ದೇವಾಲಯಗಳನ್ನು ಸಾವಿರಾರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ.  ಇವು ಇಂದಿಗೂ ಅತ್ಯಂತ ಪವಿತ್ರವಾಗಿವೆ.  ಅದಕ್ಕಾಗಿಯೇ ಅಂತಹ ಪವಿತ್ರ ಸ್ಥಳವನ್ನು ಪ್ರವೇಶಿಸುವ ಮೊದಲು ಶುದ್ಧ ಮತ್ತು ಸಾಧಾರಣವಾದ ಬಟ್ಟೆಗಳನ್ನು ಧರಿಸಬೇಕು.  ಅದರಲ್ಲೂ ಸಾಂಪ್ರದಾಯಿಕ ಬಟ್ಟೆಗಳನ್ನು ಮಾತ್ರ ಧರಿಸಬೇಕು. ದೇವಾಲಯವನ್ನು ಪ್ರವೇಶಿಸುವ ಮೊದಲು ಪ್ರತಿಯೊಬ್ಬರೂ ತಮ್ಮ ಪಾದರಕ್ಷೆಗಳನ್ನು ಹೊರಗೆ ಬಿಡಬೇಕು. ಇದನ್ನು ಮಾಡುವುದು ನೀವು ದೇವರಿಗೆ ನೀಡುವ ಗೌರವದ ಸಂಕೇತವಾಗಿದೆ.

​ದೇವಸ್ಥಾನದಲ್ಲಿ ಗಂಟೆ ಏಕೆ ಬಾರಿಸುತ್ತಾರೆ ?

ಹಿಂದೂ ಧರ್ಮದ ಸಂಪ್ರದಾಯದಲ್ಲಿ
ಅನಾದಿಕಾಲದಿಂದಲೂ ದೇವಾಲಯಗಳಲ್ಲಿ ಘಂಟಾನಾದ ಮೊಳಗಿಸುವ ಪದ್ಧತಿ ಇದೆ. ದೇವರ ದರ್ಶನ ಪಡೆಯುವ ಮೊದಲು ಗರ್ಭಗುಡಿಯ ಮುಂಭಾಗದಲ್ಲಿರುವ ಘಂಟೆಯನ್ನು ಹೊಡೆದು ದೇವರಿಗೆ ಕೈಮುಗಿಯುವುದು ಹಿಂದೂಗಳು ಆಚರಿಸುತ್ತಾ ಬಂದಿರುವ ಆಚರಣೆ.

ಭಕ್ತರು ಘಂಟೆ ಬಾರಿಸಿದಾಗ ಅಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಿ ಭಕ್ತಿಭಾವ ಮೂಡುತ್ತದೆಯಲ್ಲದೇ, ಭಕ್ತರ ಮನಸ್ಸಿನಲ್ಲಿ ಒಂದು ರೀತಿಯ ಶಾಂತತೆ ನೆಲೆಸುವಂತೆ ಮಾಡಲು ಇದು ಸಹಕಾರಿಯಾಗುತ್ತೆ. ಹೀಗಾಗೇ ದೇವಾಲಯಗಳಲ್ಲಿ ಘಂಟೆ ಮೊಳಗಿಸುವುದರ ಹಿಂದೆಯೂ ಅದರದ್ದೇ ಆದ ಮಹತ್ವ ಇದೆ ಎನ್ನಲಾಗುತ್ತೆ.

ಭಕ್ತರು ದೇವಾಲಯವನ್ನು ಪ್ರವೇಶಿಸಿದ ತಕ್ಷಣ ಗಂಟೆಯನ್ನು ಬಾರಿಸುತ್ತಾರೆ.ದೇವಾಲಯದಲ್ಲಿ ಗಂಟೆ ಬಾರಿಸುವುದರಿಂದ ಸುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗಿ ನಮ್ಮ ಪ್ರಾರ್ಥನೆ ಈ ಮೂಲಕ ದೇವರನ್ನು ತಲುಪಿ ನಮಗೆ ದೇವರು ಆಶೀರ್ವಾದ ಮಾಡುತ್ತಾನೆ  ಎಂದು ಅನೇಕರು ನಂಬುತ್ತಾರೆ.

ವೈಜ್ಞಾನಿಕವಾಗಿ ಘಂಟಾನಾದ ನಮ್ಮ ಏಕಾಗ್ರತೆಯನ್ನು ದೇವರ ಪ್ರಾರ್ಥನೆಯಲ್ಲಿ ತಲ್ಲೀನಗೊಳ್ಳುವಂತೆ ಮಾಡುತ್ತದೆ. ದೇವಾಲಯಗಳಲ್ಲಿರುವ ಘಂಟೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸ್ತಾರೆ. ಘಂಟೆಯ ನೀನಾದ ಏಕಾಗ್ರತೆ ಮೂಡಿಸುತ್ತದೆ. ಘಂಟೆಯ ಶಬ್ದವು ನಮ್ಮ ಬಲ ಮತ್ತು ಎಡ ಮೆದುಳಿನ ನಡುವೆ ಅನ್ಯೋನ್ಯತೆಯನ್ನು ತರಲು ಸಾಧ್ಯವಾಗುತ್ತದೆಯಂತೆ. ಘಂಟಾನಾದವು ಕನಿಷ್ಟ 7 ಸೆಕೆಂಡ್‍ಗಳ ಕಾಲ ಪ್ರತಿಧ್ವನಿಸುತ್ತೆ. ಇದು ಮೆದುಳಿನ ಮೇಲೆ ಪರಿಣಾಮ ಬೀರುತ್ತೆ.

ಘಂಟೆಯ ಶಬ್ದವು ಓಂಕಾರ ಸ್ವರೂಪದಿಂದ ಕೂಡಿರುತ್ತದೆ. ಇದರಿಂದ ದುಷ್ಟಶಕ್ತಿಗಳ ಕಾಟ, ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ.

ಘಂಟೆಯ ನಾಲಗೆಯಲ್ಲಿ ಸರಸ್ವತಿ ಮಾತೆ ನೆಲೆಸಿರುತ್ತಾಳೆ. ಮಹಾರುದ್ರನು ಘಂಟೆಯ ಉದರ ಭಾಗದಲ್ಲಿ ನೆಲೆಸಿದ್ದರೆ, ಮುಖ ಭಾಗದಲ್ಲಿ ಬ್ರಹ್ಮದೇವ ನೆಲೆಸಿರುತ್ತಾನೆ. ಇನ್ನು ಕೊನೆಯ ಭಾಗದಲ್ಲಿ ವಾಸುಕಿ ಹಾಗೆಯೇ ಮೇಲಿರುವ ಹಿಡಿ ಭಾಗದಲ್ಲಿ ಪ್ರಾಣಶಕ್ತಿ ಇರುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ದೇವಸ್ಥಾನದಲ್ಲಿ ತಲೆಯನ್ನು ನೆಲಕ್ಕೆ ತಾಗಿಸಿ ನಮಸ್ಕರಿಸುವುದು ನಮ್ರತೆಯ ಸಂಕೇತವಾಗಿದೆ. ಅದೇ ರೀತಿ ಮನೆಯಲ್ಲಿ ಬಾರಿಸುವ ಗಂಟೆಯು ಮನಸ್ಸಿಗೆ ಆಧ್ಯಾತ್ಮಿಕ ಸಂತೋಷವನ್ನು ನೀಡುತ್ತದೆ.

ದೇವಾಲಯದಲ್ಲಿ ಗಂಟೆ ಬಾರಿಸಿ, ಶಿರಬಾಗಿ ನಮಸ್ಕರಿಸಿದ ನಂತರ ನಾವು ಪೂಜೆಯನ್ನು ಮಾಡುತ್ತೇವೆ. ಆದರೆ ಈ ಪೂಜೆಗಳು ಪ್ರತಿ ದೇವಸ್ಥಾನದಲ್ಲಿ ವಿಭಿನ್ನ ಆಚರಣೆಗಳನ್ನು ಹೊಂದಿರುತ್ತವೆ. ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಕೆಲವು ದೇವಸ್ಥಾನಗಳಲ್ಲಿ ಹೋಮ ಹವನಗಳನ್ನು ಮಾಡುತ್ತಾರೆ. ಒಂದೊಂದು ದೇವಾಲಯದಲ್ಲಿ ಒಂದೊಂದು ರೀತಿಯ ಪೂಜಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಈ ರೀತಿಯಲ್ಲಿ ದೇವರಿಗೆ ಪೂಜೆ ಮಾಡುವುದರಿಂದ ದೇವರುಗಳಿಂದ ಧನಾತ್ಮಕ ಶಕ್ತಿ ಬರುತ್ತದೆ ಎಂದು ಹಲವರು ನಂಬುತ್ತಾರೆ.

ವೈಜ್ಞಾನಿಕ ದೃಷ್ಟಿಕೋನದಿಂದ, ದೇವಾಲಯಗಳಲ್ಲಿನ ವಿಗ್ರಹಗಳಲ್ಲಿ ಕೆಲವು ಲೋಹಗಳನ್ನು ಇರಿಸಲಾಗುತ್ತದೆ. ಅವುಗಳ ಮೂಲಕ ಹರಡುವ ಕಾಂತಿ ತುಂಬಾ ಶಕ್ತಿಯುತವಾಗಿರುತ್ತದೆ. ಅದಕ್ಕೇ ದೇವಸ್ಥಾನಕ್ಕೆ ಹೋದಾಗ ಆಯಸ್ಕಾಂತೀಯ ಶಕ್ತಿ ಸಿಗುತ್ತದೆ. ಇದರಿಂದ ದೊರೆಯುವ ಧನಾತ್ಮಕ ಶಕ್ತಿಯಿಂದ ಆರೋಗ್ಯವಂತರಾಗಿಯೂ ಮತ್ತು ಸಂತೋಷವಾಗಿಯೂ ಇರುತ್ತಾರೆ ಎಂಬ ನಂಬಿಕೆಯಿದೆ.

ಪ್ರಮುಖ ಸೂಚನೆ : ಇಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಗಳು ಮತ್ತು ಪರಿಹಾರಗಳು ಧಾರ್ಮಿಕ ನಂಬಿಕೆಗಳನ್ನು ಆಧರಿಸಿವೆ.  ಇವುಗಳನ್ನು ಊಹೆಗಳ ಆಧಾರದ ಮೇಲೆ ನೀಡಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!