ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ. ಅಕ್ಟೋಬರ್.05 :
ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ 2023 ರ ಬೃಹತ್ ಶೋಭಾ ಯಾತ್ರೆ ಇದೇ ಅಕ್ಟೋಬರ್ 08 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಗುರುವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ರ್ಯಾಲಿ ಉದ್ಘಾಟನೆಯನ್ನು ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಗಳು ಚಾಲನೆ ನೀಡಿದರು. ಹಿಂದೂ ಮಹಾಗಣಪತಿಯ ಸಮಿತಿಯ ಅಧ್ಯಕ್ಷರಾದ ಜಿ.ಎಂ. ಸುರೇಶ್, ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್, ಸೇರಿದಂತೆ ಪ್ರಮುಖರ ನೇತೃತ್ವದಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ವೇಳೆ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಪ್ರಬಂಜನ್ ಮಾತನಾಡಿ, ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಮಸ್ತ ಹಿಂದೂ ಬಾಂಧವರು ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಹಿಂದೂಗಳನ್ನು ಜಾಗೃತಿಗೊಳಿಸುವುದು ನಮ್ಮ ಉದ್ದೇಶವಾಗಿದ್ದು, ಸಮಸ್ತರು ಇದನ್ನೆ ಆಹ್ವಾನವೆಂದು ತಿಳಿದು ಶೋಭಾಯಾತ್ರೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಈ ಬೈಕ್ ರ್ಯಾಲಿಯು ಹೊಳಲ್ಕೆರೆ ರಸ್ತೆಯ
ಕನಕ ಸರ್ಕಲ್ನಿಂದ ಹೊರಟ ಬೈಕ್ರ್ಯಾಲಿ ಸಂಗೊಳ್ಳಿರಾಯಣ್ಣ ವೃತ್ತ, ಬುರುಜನಹಟ್ಟಿ ಸರ್ಕಲ್, ಆನೆಬಾಗಿಲು, ಉಚ್ಚಂಗಿಯಲ್ಲಮ್ಮ ದೇವಸ್ಥಾನ, ರಂಗಯ್ಯನಬಾಗಿಲು, ಜೋಗಿಮಟ್ಟಿ ರೋಡ್, ಬುದ್ದ ಸರ್ಕಲ್, ಚೈತನ್ಯ ಸರ್ಕಲ್, ಬಿ.ಡಿ.ರೋಡ್, ಗಾಂಧಿ ಸರ್ಕಲ್, ಮೆದೇಹಳ್ಳಿ ರೋಡ್, ಎನ್.ಹೆಚ್-ಬೈಪಾಸ್, ಜೆ.ಸಿ.ಆರ್. ವಾಸವಿ ಸರ್ಕಲ್, ಅಂಬೇಡ್ಕರ್ ವೃತ್ತದ ಮುಂಭಾಗದಿಂದ ಹಳೆ ಮಾಧ್ಯಮಿಕ ಶಾಲೆ ಆವರಣದಲ್ಲಿ ಮುಕ್ತಾಯಗೊಂಡಿತು. ಈ ರ್ಯಾಲಿ ಆರಂಭದಿಂದ ಮುಗಿಯುವ ತನಕ ಮಾರ್ಗದುದ್ದಕ್ಕೂ ಜೈ ಶ್ರೀ ರಾಮ್, ಭಾರತ್ ಮಾತಾ ಕೀ ಜೈ ಘೋಷಣೆಗಳು ಗಮನಸೆಳೆದವು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪಿ. ರುದ್ರೇಶ್, ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್, ಬಜರಂಗದಳ ಜಿಲ್ಲಾ ಸಂಯೋಜಕರು ಸಂದೀಪ್, ಜಿಲ್ಲಾ ಮುಖಂಡರಾದ ಅಶೋಕ್,ರಾಜೇಶ್, ನಗರ ಸಹ ಕಾರ್ಯದರ್ಶಿ ರಂಗಸ್ವಾಮಿ, ಬಜರಂಗದಳ ನಗರ ಸಂಯೋಜಕರು ರಂಗಸ್ವಾಮಿ, ಗ್ರಾಮಾಂತರ ಅಧ್ಯಕ್ಷರಾದ ಶಶಿಧರ್ ಸಮಿತಿಯ ಸದಸ್ಯರಾದ ವಿಪುಲ್ ಜೈನ್, ಕಾರ್ತಿಕ್, ಅಜಿತ್, ಸೇರಿದಂತೆ ಸಾವಿರಾರು ಮಂದಿ ಈ ಬೈಕ್ ರ್ಯಾಲಿಯಲ್ಲಿ ಭಾಗಿಯಾಗಿದ್ದರು.