ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ : ವೈರಲ್ ಆಯ್ತು ಈ ವಿಡಿಯೋ….

ಸುದ್ದಿಒನ್, ಚಿತ್ರದುರ್ಗ : ಚಿತ್ರದುರ್ಗದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಮಹೋತ್ಸವವೆಂದರೆ ರಾಜ್ಯದಲ್ಲೇ ಅಲ್ಲ ದೇಶದಲ್ಲೇ ಹೆಸರುವಾಸಿ. ಅಷ್ಟರ ಮಟ್ಟಿಗೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಪ್ರಖ್ಯಾತಿ ಪಡೆದಿದೆ.

ಅದರಲ್ಲೂ ಶೋಭಾಯಾತ್ರೆ ಎಂದರೆ ಮತ್ತಷ್ಟು ವಿಶೇಷ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ತುಮಕೂರು, ಬೆಂಗಳೂರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸಂಭ್ರಮದಿಂದ ಪಾಲ್ಗೊಂಡು ವಿಜೃಂಭಣೆಯಿಂದ ನಡೆಯುವ ಮೆರವಣಿಗೆಯಲ್ಲಿ, ಆ ಜನ ಜಾತ್ರೆಯಲ್ಲಿ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವುದನ್ನು ನೋಡುವುದೇ ಒಂದು ಅಂದ. ಗಣಪತಿ ಬಪ್ಪ ಮೋರಯ, ಜೈ ಶ್ರೀರಾಮ್, ಜೈ ಭಜರಂಗ ಬಲಿ ಹೀಗೆ ಗಣಪತಿಯನ್ನು ನೆನೆದು ಘೋಷಣೆಯನ್ನು ಕೂಗುತ್ತಾ ಹಾಡಿಗೆ ಹೆಜ್ಜೆ ಹಾಕುತ್ತಾ ಮೈಮರೆತು ಕುಣಿಯುವುದು ಇಲ್ಲಿನ ವಿಶೇಷ.

ಈ ಬಾರಿಯ ಮತ್ತೊಂದು ವಿಶೇಷವೆಂದರೆ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯವರೇ ಸ್ವತಃ ಮುಂಬಯಿಯಿಂದ ಡಿಜೆ ತರಿಸಿದ್ದು ಯುವ ಸಮುದಾಯದ ಉತ್ಸಾಹವನ್ನು ಮತ್ತಷ್ಟು ಇಮ್ಮಡಿಗೊಳಿಸಿತ್ತು. ಶೋಭಾಯಾತ್ರೆ ಕೆಲವು ದಿನಗಳ ಮುಂಚಿನಿಂದಲೇ ಅವರೇ ಹೆಚ್ಚು ಪ್ರಚಾರ ಮಾಡಿ ವಿಡಿಯೋ ಸಂದೇಶದ ಮೂಲಕ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದ್ದು ವಿಶೇಷ.

ಅಕ್ಟೋಬರ್ 8 ರಂದು ನಡೆದ ಶೋಭಾಯಾತ್ರೆಯ ದಿನದಂದು ಖುದ್ದಾಗಿ ಶಾಸಕರೇ ಕುಣಿದು ಕುಪ್ಪಳಿಸಿ ಭಕ್ತಿ ಸಮರ್ಪಿಸಿದ್ದರು. ಇದನ್ನು ಕಂಡ ಯುವ ಸಮೂಹ ಮತ್ತಷ್ಟು ಹುಮ್ಮಸ್ಸಿನಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದ್ದರು.

ಆದರೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮತ್ತು ಮಾಜಿ ಸಂಸದ, ಕೆಪಿಸಿಸಿ ಕಾರ್ಯಾದ್ಯಕ್ಷ ಬಿ.ಎನ್.ಚಂದ್ರಪ್ಪ ಅವರು ಡಿಜೆ ಸದ್ದಿನ ಶಬ್ದ ತಡೆಯಲಾರದೆ ಕಿವಿಯಲ್ಲಿ ಹರಳೆಯನ್ನು ಇಟ್ಟುಕೊಂಡು ಭಾಗವಹಿಸಿದ್ದರು. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 

Leave a Reply

Your email address will not be published. Required fields are marked *

error: Content is protected !!