Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ : ನಗರದ ಬಿ.ಡಿ. ರಸ್ತೆಯಲ್ಲಿ ಪ್ರಸಾದದ ವ್ಯವಸ್ಥೆ, ಸಿದ್ದತೆ ಹೇಗಿದೆ ?

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.08 : ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಇಂದು ಅದ್ದೂರಿಯಾಗಿ ನೆರವೇರಲಿದೆ.

ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಬೇರೆಬೇರೆ ಕಡೆಯಿಂದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬರುವ ಜನರಿಗೆ ಪ್ರಸಾದವನ್ನು ವಿತರಿಸುವ ನಿಟ್ಟಿನಲ್ಲಿ ನಗರದ ಹಲವಾರು ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ಜನಿಕರು ಇಂದು ಬೆಳಗಿನ ಜಾವದಿಂದಲೇ ಪ್ರಸಾದಕ್ಕೆ ಭರದ ಸಿದ್ದತೆ ಮಾಡಿದ್ದಾರೆ.

ಬಿ.ಡಿ. ರಸ್ತೆಯ ಎರಡೂ ಬದಿಗಳಲ್ಲಿ ಶಾಮಿಯಾನ ಪೆಂಡಾಲ್ ಹಾಕಿ ಬಾಣಸಿಗರಿಂದ ಲಾಡು, ಬಾದುಷಾ, ಮೈಸೂರ್ ಪಾಕ್, ವಾಂಗೀಬಾತ್, ರೈಸ್ ಬಾತ್, ನೀರಿನ ಪಾಕೆಟ್‌ಗಳನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಪ್ರಸಾದ ವಿತರಿಸಿ ಭಕ್ತಿ ಸಮರ್ಪಿಸಲಿದ್ದಾರೆ.

ಡೆಂಡಲ್ ಕಾಲೇಜು ಬಳಿ : ನಗರದ ಎಸ್.ಜೆ.ಎಂ. ಡೆಂಟಲ್ ಕಾಲೇಜು ಬಳಿ ಗೆಳೆಯರ ಬಳಗದ ವತಿಯಿಂದ ಇದೇ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡುತ್ತಿರುವುದಾಗಿ ರವಿ ಹೇಳಿದರು. ಕಿರಣ್, ಹರೀಶ್, ಚಂದ್ರು, ಅಮಿತ್, ರವಿ,ಶಿವು,  ಇನ್ನಿತರೆ ಸ್ನೇಹಿತರಲ್ಲರೂ ಸೇರಿ ನಾವೇ ಹಣವನ್ನು ಸಂಗ್ರಹಿಸಿ ಸುಮಾರು ಐದು ಸಾವಿರ ಜನರಿಗೆ ಈ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಚಿತ್ರದುರ್ಗ ಆರ್ಯವೈಶ್ಯ ಸಂಘ ಹಾಗೂ ವಾಸವಿ ಕ್ಲಬ್ ಫೋರ್ಟ್ ಚಿತ್ರದುರ್ಗ ವತಿಯಿಂದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸುಮಾರು 25 ಸಾವಿರ ಭಕ್ತಾದಿಗಳಿಗೆ ಸಿಹಿಯಾದ ಲಾಡು ಮತ್ತು ನೀರಿನ ವ್ಯವಸ್ಥೆ ಮಾಡಿದ್ದೇವೆ. ಕಳೆದ ಹತ್ತು ವರ್ಷದಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಎ.ಆರ್. ಲಕ್ಷ್ಮಣ ಅವರು ತಿಳಿಸಿದರು. ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ಅವಿನಾಶ್, ನಾಗರಾಜ ಶೆಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.

ನಗರದ ಪೈ ಇಂಟರ್ನ್ಯಾಷನಲ್ ಬಳಿ ಕೋಟೆ ಗೆಳೆಯರ ಬಳಗದ ವತಿಯಿಂದ ಲಕ್ಷ್ಮೀ ಬಜಾರ್ ನ ಸ್ನೇಹಿತರಲ್ಲಾ ಸೇರಿ ಹಣವನ್ನು ಸಂಗ್ರಹಿಸಿ ಕಳೆದ 8 ವರ್ಷಗಳಿಂದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸುಮಾರು 20 ಸಾವಿರ ಜನರಿಗಾಗುವಷ್ಟು ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದೇವೆ. ಇಲ್ಲಿಯವರೆಗೂ ಯಾವುದೇ ತೊಂದತೆಯಿಲ್ಲದಂತೆ ನಾವು ಈ ಸೇವೆಯನ್ನು ಮಾಡುತ್ತಿದ್ದೇವೆ ಎಂದು ಮಹೇಶ್ ತಿಳಿಸಿದರು.

ಲಕ್ಷ್ಮೀ ಬಜಾರ್ ಗ್ರೂಪ್ ನವರಿಂದ ಸುಮಾರು ಹತ್ತು ಸಾವಿರ ಜನರಿಗೆ ಆರೆಂಜ್ ಜ್ಯೂಸ್ ವ್ಯವಸ್ಥೆ ಮಾಡಲಾಗಿದೆ.

ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಸ್ನೇಹಿತರಿಂದ ಸುಮಾರು 25 ಸಾವಿರ ಐಸ್ ಕ್ರೀಂ ವಿತರಿಸಲಾಗುತ್ತದೆ ಎಂದು ಭೋಜರಾಜ್ ರವರು ತಿಳಿಸಿದರು.

ಮಧು ಟೈಮ್ಸ್ ವತಿಯಿಂದ ಮೂರು ಸಾವಿರ ಜನರಿಗೆ ವಾಂಗಿ ಬಾತ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ರೆಡ್ ಬುಲ್ಸ್ ಮತ್ತು ಗುರುರಾಜ ಗ್ರೂಪ್ಸ್ ವತಿಯಿಂದ ಸುಮಾರು ಹತ್ತು ಸಾವಿರ ಜನರಿಗೆ ವಾಂಗೀಬಾತ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಗೋವರ್ಧನ ಅವರು ತಿಳಿಸಿದರು.

ಬರಗೇರಮ್ಮ ಗ್ರೂಪ್ಸ್ ವತಿಯಿಂದ ಐದು ಸಾವಿರ ಜನರಿಗೆ ರೈಸ್ ಬಾತ್ ಮತ್ತು ಮೆಣಸಿನಕಾಯಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅಶೋಕ್ ತಿಳಿಸಿದರು.

ಗಾಂಧಿ ವೃತ್ತದಲ್ಲಿರುವ ರಾಧಾಕೃಷ್ಣ ಹಾರ್ಡ್‌ವೇರ್ ನವರಿಂದ ಸುಮಾರು ಐದು ಸಾವಿರ ಜನರಿಗಾಗುವಷ್ಟು ಬಾದುಷಾ, ಮೈಸೂರು ಪಾಕ್, ಟೊಮ್ಯಾಟೊ ಬಾತ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ನಗರದ ಶ್ರೀ ಕೃಷ್ಣ ರಾಜೇಂದ್ರ ಕೇಂದ್ರ ಗ್ರಂಥಾಲಯದ ಬಳಿ ಹಿಂದೂ ಮಹಾಗಣಪತಿ ಸಹಕಾರ ಸಂಘ ಹಾಗೂ ಅಪ್ಪು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಾವೆಲ್ಲರೂ ಹಣವನ್ನು ಸಂಗ್ರಹಿಸಿ ಈ ಬಾರಿಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಸುಮಾರು 12 ರಿಂದ 15 ಸಾವಿರ ಜನರಿಗೆ ರೈಸ್ ಬಾತ್ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು. ಕಳೆದ ವರ್ಷವೂ ಸಹಾ ಇದೇ ರೀತಿಯ ವ್ಯವಸ್ಥೆ ಮಾಡಲಾಗಿತ್ತು ಎಂದು ತಿಳಿಸಿದರು.

ಇಷ್ಟೇ ಅಲ್ಲದೇ ಇನ್ನೂ ಅನೇಕ ಸಂಘ ಸಂಸ್ಥೆಗಳು, ಸಂಘಟನೆಯವರು, ಸಾರ್ವಕನಿಕರು ಬರುವ ಸಾವಿರಾರು ಜನರಿಗೆ ಪ್ರಸಾದ, ಪಾನೀಯವನ್ನು ಉಚಿತವಾಗಿ ವಿತರಿಸಿ ತಮ್ಮ ಕೈಲಾದ ಸೇವೆಯನ್ನು ಮಾಡುವ ಮೂಲಕ ಹಿಂದೂ ಮಹಾಗಣಪತಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.

ವರ್ಷದಿಂದ ವರ್ಷಕ್ಕೆ ಶೋಭಾಯಾತ್ರೆಗೆ ಹೆಚ್ಚು ಜನರು ಆಗಮಿಸುತ್ತಿದ್ದು ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ದೇಶದಲ್ಲಿಯೇ ಅತ್ಯಂತ ಹೆಸರುವಾಸಿಯಾಗಿದೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!