ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಚಾಲನೆ ನೀಡಿದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು : ಮುಕ್ತಿ ಬಾವುಟ ಹರಾಜಿನಲ್ಲಿ ಪಡೆದ ಶಾಸಕ ಕೆ.ಸಿ. ವೀರೇಂದ್ರ

2 Min Read

 

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.08 : ದೇಶದಲ್ಲಿಯೇ ಅತಿ ಹೆಚ್ಚು ಪ್ರಖ್ಯಾತಿ ಪಡೆದ ಚಿತ್ರದುರ್ಗದ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ  ನೇತೃತ್ವದಲ್ಲಿ ನಡೆಯುವ
ಹಿಂದೂ ಮಹಾಗಣಪತಿ ಮಹೋತ್ಸವದ ಶೋಭಾಯಾತ್ರೆ ಅದ್ದೂರಿಯಾಗಿ ನೆರವೇರಿತು.

ಹಿಂದೂ ಮಹಾಗಣಪತಿಯ ಬೃಹತ್ ಶೋಭಾ ಯಾತ್ರೆಯ ಉದ್ಘಾಟನೆಯನ್ನು ಮಹಾರಾಷ್ಟ್ರದ ಕೊಲ್ಲಾಪುರದ  ಕನ್ನೇರಿಮಠದ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸಿದರು. ನಂತರ ಮಾತನಾಡಿದ ಅವರು ಸನಾತನ ಧರ್ಮದ ಕುರಿತಾಗಿ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದ ತಮಿಳುನಾಡಿನ ಸಚಿವ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಅಜ್ಜನಿಗೆ ಸಾಧ್ಯವಾಗದ್ದನ್ನು ಇವನು ಮಾತನಾಡುತ್ತಿದ್ದಾನೆ ಎಂದು ಕಿಡಿಕಾರಿದರು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು
ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ,
ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿಗಳು,
ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಜಿಗಳು
ಶ್ರೀ ಇಮ್ಮಡಿ ಕೇತೇಶ್ವರ ಮಹಾಸ್ವಾಮಿಜಿಗಳು,
ಶ್ರೀ ಸೇವಾಲಾಲ್ ಮಹಾಸ್ವಾಮಿಗಳು ವಹಿಸಿದರು.

ನಂತರ ನಡೆದ ಬಾವುಟ ಹಾರಾಜು ಪ್ರಕ್ರಿಯೆಯಲ್ಲಿ ಮುಕ್ತಿ ಬಾವುಟವನ್ನು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯವರು ರೂ. ‍1.51 ಲಕ್ಷಕ್ಕೆ ಹರಾಜಿನಲ್ಲಿ ಪಡೆದರು.

ಗಣಪತಿಯ ಹೂವಿನ ಹಾರವನ್ನು 41 ಸಾವಿರ ರೂಪಾಯಿಗಳಿಗೆ ಶಿವಾನಂದ ಅವರು,

ಸೋಮನಾಥ ಮಂದಿರದ ಮಾದರಿಯನ್ನು  95 ಸಾವಿರ ರೂಪಾಯಿಗಳಿಗೆ ವೀರಶೈವ ಘಟಕದ ಅಧ್ಯಕ್ಷ
ಮಂಜುನಾಥ್ ಅವರು,

ರಾಮ ಮಂದಿರ ಮಾದರಿಯನ್ನು ಭೀಮಸಮುದ್ರದ PVSV ಹರೀಶ್ ಅವರು 1,05,000 (ಒಂದು ಲಕ್ಷದ ಐದು ಸಾವಿರ ರೂಪಾಯಿಗಳಿಗೆ,

ಅಂತರರಾಷ್ಟ್ರೀಯ ಚಿತ್ರ ಕಲಾವಿದ ವಿಲಾಸ್ ನಾಯಕ್ ಅವರು ರಚಿಸಿದ್ದ ಗಣಪತಿ ಚಿತ್ರವನ್ನು 51 ಸಾವಿರ ರೂಪಾಯಿಗಳಿಗೆ ಬೆಸ್ಟ್ ಸ್ಟಡಿಯೋದ ಧರ್ಮ ಅವರು,

ಹಣ್ಣಿನ ಪುಟ್ಟಿಯನ್ನು ಬಿವಿಕೆಎಸ್ ಬಡಾವಣೆಯ ಕಾರ್ತಿಕ್ ಅವರು 25 ಸಾವಿರ ರೂಪಾಯಿಗೆ

ದ್ರಾಕ್ಷಿಯ ಹಾರವನ್ನು ಕನಕ ಬೋರ್ ವೆಲ್ಸ್ ನ ಓಂಕಾರಮೂರ್ತಿ 35ಸಾವಿರ ರೂಪಾಯಿಗಳಿಗೆ ಪಡೆದರು.

ಈ ಸಂದರ್ಭದಲ್ಲಿ  ಹಿಂದೂ ಮಹಾಗಣಪತಿಯ ಸಮಿತಿಯ ಗೌರವಾಧ್ಯಕ್ಷರಾದ ಷಡಕ್ಷರಪ್ಪ ಕೊಂಡ್ಲಹಳ್ಳಿ ಹಾಗೂ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷರಾದ ಜಿ.ಎಂ. ಸುರೇಶ್. ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶರಣ್ ಕುಮಾರ್ ಕೇಂದ್ರ ಸಚಿವ ಎ.  ನಾರಾಯಣಸ್ವಾಮಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ ಎಸ್ ನವೀನ್, ಸಮಿತಿಯ ಮಾರ್ಗದರ್ಶಕರಾದ ಬದ್ರಿನಾಥ್, ಬಜರಂಗದಳ ಪ್ರಾಂತ ಸಹ ಸಂಯೋಜಕರು ಪ್ರಭಂಜನ್ , ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಪಿ. ರುದ್ರೇಶ್ , ಜಿಲ್ಲಾ ಸಹ ಕಾರ್ಯದರ್ಶಿ ಕೇಶವ್  , ಬಜರಂಗದಳ ಜಿಲ್ಲಾ ಸಂಯೋಜಕರು ಸಂದೀಪ್ , ಜಿಲ್ಲಾ ಮುಖಂಡರಾದ ಅಶೋಕ್ , ರಾಜೇಶ್ ನಗರಾಧ್ಯಕ್ಷರಾದ ಶ್ರೀನಿವಾಸ್, ನಗರ ಉಪಾಧ್ಯಕ್ಷರಾದ ರೋಹಿತ್, ಬಜರಂಗದಳ ನಗರ ಸಂಯೋಜಕರು ರಂಗಸ್ವಾಮಿ, ಗ್ರಾಮಾಂತರ ಅಧ್ಯಕ್ಷರಾದ ಶಶಿಧರ್ ಸಮಿತಿಯ ಸದಸ್ಯರಾದ. ವಿಪುಲ್ ಜೈನ್, ಕಾರ್ತಿಕ್,  ಪ್ರಶಾಂತ್ ಅಪ್ಪಾಜಿ ಪರಿಸರ ತಿಪ್ಪೇಸ್ವಾಮಿ ಟೈಗರ್ , ವಿಕ್ರಂ ಜೈನ್ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *