ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ 12 : ನಗರದಲ್ಲಿ ಆಗಸ್ಟ್ 27 ರಿಂದ ಪ್ರತಿಷ್ಠಾಪನೆಯಾಗಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯೂ ಸೆಪ್ಟೆಂಬರ್ 13ರ ಶನಿವಾರ ಅದ್ದೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ಸಮಿತಿಯವರು ನಗರದಲ್ಲಿ ವಿವಿಧ ವೃತ್ತದಲ್ಲಿರುವ ಪ್ರತಿಮೆಗಳಿಗೆ ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ. ಈ ಅಲಂಕಾರದಿಂದ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಝಗಮಗಿಸುತ್ತಿದೆ.

ಚಿತ್ರದುರ್ಗವನ್ನು ಆಳಿದ ಮದಕರಿ ನಾಯಕ ಪ್ರತಿಮೆಯ ಬಳಿ ಈ ಬಾರಿ ವಿಶಿಷ್ಟವಾದ ಅಲಂಕಾರವನ್ನು ಮಾಡಲಾಗಿದೆ. ಮದಕರಿ ನಾಯಕ ಹಿಂದೆ ಹಿಮಾಲಯ ಪವರ್ತವನ್ನು ನಿರ್ಮಾಣ ಮಾಡಿ ಅದರ ಮೇಲೆ ಕನ್ನಡಾಂಬೆಯನ್ನು ಪ್ರತಿಷ್ಠಾಪನೆ ಮಾಡಿ ಆಕೆಯ ಕೈಗೆ ಭಾರತ ದೇಶದ ಭಾವುಟವನ್ನು ನೀಡಲಾಗಿದೆ. ನಾಯಕ ಜನಾಂಗದ ಮಹರ್ಷಿ ವಾಲ್ಮಿಕಿಯ ಚಿತ್ರವನ್ನು ಹಾಕಲಾಗಿದೆ ಇದರೊಂದಿಗೆ ಮುಂದುಗಡೆಯಲ್ಲಿ ದೇಶದ ರಕ್ಷಣೆಗೆ ಸಂಬಂಧಪಟ್ಟ ಶಸ್ತ್ರಸ್ರಗಳಾದ ಬ್ರಹ್ಮೋಸ್ ರಾಕೆಟ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇದಾದ ನಂತರ ವಿದ್ಯುತ್ ದೀಪದಲ್ಲಿ ಗಣೇಶನ ಹಾಗೂ ನಂದಿಯ ಚಿತ್ರಗಳನ್ನು ಮೂಡಿಸಲಾಗಿದೆ. ಮದಕರಿ ನಾಯಕನ ವೃತ್ತದ ಸುತ್ತಾ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿದೆ.

ಇದಾದ ನಂತರ ದೇಶಕ್ಕೆ ಸಂವಿಧಾನವನ್ನು ನೀಡಿದ ಭಾರತರತ್ನ ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೂ ಸಹಾ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ ಪ್ರತಿಮೆಯ ಹಿಂದೆ ಸ್ತಂಭಗಳ ಮೂಲಕ ಮಂಟಪವನ್ನು ನಿರ್ಮಾಣ ಮಾಡಿ ಅದಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿದೆ.
ಇನ್ನು ಒನಕೆ ಓಬವ್ವ ಪ್ರತಿಮೆ ಹಿಂದೆ ದೇವಿಯ ಚಿತ್ರವನ್ನು ಬಿಡಿಸಲಾಗಿದೆ ಇಲ್ಲಿಯೂ ಸಹಾ ವಿದ್ಯುತ್ ದೀಪದಲ್ಲಿ ಅಲಂಕಾರವನ್ನು ಮಾಡಲಾಗಿದೆ.

ಭಗವಾನ್ ಮಹಾವೀರ ಪ್ರತಿಮೆಗೆ ಮಂಟಪದ ಅಲಂಕಾರವನ್ನು ಮಾಡಲಾಗಿದೆ. ಉತ್ತಮವಾದ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ. ಇಲ್ಲಿಯೂ ಸಹಾ ವಿದ್ಯುತ್ ದೀಪಗಳನ್ನು ಅಲಂಕಾರ ಮಾಡಲಾಗಿದೆ.
ವಾಸವಿ ವೃತ್ತದಲ್ಲಿನ ಓಂ ಚಿತ್ರಕ್ಕೂ ಸಹಾ ಅಲಂಕಾರವನ್ನು ಮಾಡಲಾಗಿದೆ ಇಲ್ಲಿ ಓಂ ಚಿತ್ರದ ಸುತ್ತಾ ಮಂಟಪಗಳನ್ನು ನಿರ್ಮಾಣ ಮಾಡಿ ಸುತ್ತಲೂ ವಿದ್ಯುತ್ ದೀಪಗಳಿಂದ ಓಂ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಹೊಳಲ್ಕರೆ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಯೂ ಸಹಾ ವಿಶೇಷವಾಗಿ ಅಲಂಕಾರವನ್ನು ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣನ ಹಿಂದೆ ತಾಂಡವಾಡುತ್ತಿರುವ ಶಿವವನ್ನು ಇರಿಸಲಾಗಿದೆ. ಆತನ ಕೈಯಲ್ಲಿ ಢಮರುಗ ತ್ರಿಶೂಲವನ್ನು ನೀಡಲಾಗಿದೆ. ಪ್ರತಿಮೆಯ ಮುಂದೆ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.
ಹೊಳಲ್ಕೆರೆ ರಸ್ತೆಯ ಕೊನೆಯಲ್ಲಿ ಇರುವ ಕನಕ ವೃತ್ತದಲ್ಲಿನ ಪ್ರತಿಮೆಯಲ್ಲಿ ಕನಕದಾಸರ ಹಿಂದೆ ಮಂಟಪವನ್ನು ನಿರ್ಮಾಣ ಮಾಡಿ ಅಲ್ಲಿ ವೆಂಕಟೇಶ್ವರ ಹಾಗೂ ಪದ್ಮಾವತಿಯನ್ನು ಚಿತ್ರವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದ್ದಲ್ಲದೆ ಪ್ರತಿಮೆಯ ಜಾಗದಲ್ಲಿ ಸತ್ತಲೂ ಸಹಾ ವಿದ್ಯುತ್ ದೀಪಗಳಿಂದ ಆಲಂಕಾರವನ್ನು ಮಾಡಲಾಗಿದೆ. ಕನಕದಾಸರ ಪ್ರತಿಮೆಯ ಬಳಿ ಆನೆಗಳನ್ನು ಇರಿಸಲಾಗಿದೆ.

ಇದ್ದಲ್ಲದೆ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾಗಿರುವ ಮಂಟಪದಿಂದ ಹಿಡಿದು ಹೊಳಲ್ಕರೆ ರಸ್ತೆಯ ಕೊನೆಯವರೆಗೂ ಸಹಾ ಎಲ್ಲಾ ಅಂಗಡಿ, ಮನೆಯ ಮೇಲೆ ವಿದ್ಯುತ್ ದೀಪಗಳಿಂದ ಅಲಂಕಾರವನ್ನು ಮಾಡಲಾಗಿದೆ ಇದ್ದಲ್ಲದೆ ಒನಕೆ ಓಬವ್ವ ವೃತ್ತದಲ್ಲಿ ಹಾಗೂ ಗಾಂಧಿ ವೃತ್ತದಲ್ಲಿ ಕೇಸರಿ ಬಣ್ಣದ ಬಂಟಿಗ್ಸ್ ಗಳನ್ನು ಹಾಕಲಾಗಿದೆ. ಗಣಪತಿ ಸಾಗುವ ದಾರಿಯುದ್ದಕ್ಕೂ ಸಹಾ ವಿವಿಧ ರೀತಿಯ ಅಲಂಕಾರವನ್ನು ಜನರೇ ಸ್ವಯಂ ಆಗಿ ಮಾಡಿದ್ದಾರೆ. ಶೋಭಾಯಾತ್ರೆಯ ನಾಳೆ ಇದರಲ್ಲಿ ಭಾಗವಹಿಸುವ ಭಕ್ತರಿಗಾಗಿ ಅನ್ನ ಪ್ರಸಾದ, ಕುಡಿಯುವ ನೀರು, ಐಸ್ ಕ್ರೀಂ, ತಂಪಾದ ಪಾನೀಯಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಹಂಚಲಿದ್ದಾರೆ. ಒಟ್ಟಾರೆಯಾಗಿ ಚಿತ್ರದುರ್ಗದ ಹಿಂದೂ ಮಹಾಗಣಪತಿಯ ಹಿರಿಮೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಶೋಭಾಯಾತ್ರೆಗೆ ನಗರವೇ ವಿದ್ಯುತ್ ದೀಪಾಲಂಕಾರಗಳಿಂದ ಝಗಮಗಿಸುತ್ತಿರುವುದು ನೋಡುಗರ ಕಣ್ಣು ಕೋರೈಸುವಂತಿದೆ. ಶೋಬಾಯಾತ್ರೆಗೆ ಇಡೀ ನಗರವೇ ಸಜ್ಜಾಗಿದ್ದು ನಾಳೆ ಬಾರೀ ಜನಸ್ತೋಮ ಸೇರುವ ನಿರೀಕ್ಷೆಯಿದೆ.






