ಇಂದಿನಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತಿದೆ. ಸಮವಸ್ತ್ರ ಬಿಟ್ಟು ಹಿಜಾಬ್ ಗೆ ಅವಕಾಶ ಇಲ್ಲ ಅಂತ ಈಗಾಗಲೇ ಇಲಾಖೆ ಸ್ಪಷ್ಟಪಡಿಸಿದೆ.ಕೆಲವೊಂದು ಕಡೆ ವಿದ್ಯಾರ್ಥಿನಿಯರು ಭವಿಷ್ಯದ ದಿನಗಳಿಗೆ ಬೆಲೆ ಕೊಟ್ಟು, ವಿದ್ಯೆಯೇ ಮುಖ್ಯ ಎಂದು ಹಿಜಾಬ್ ತೆಗೆದಿರಿಸಿ, ಪರೀಕ್ಷೆ ಬರೆದಿದ್ದಾರೆ. ಆದ್ರೆ ಇನ್ನು ಕೆಲವೊಂದು ಕಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಬಂದಿದ್ದಾರೆ.
ಬೀದರ್ ನ ಓಲ್ಡ್ ಸಿಟಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೆಲವೊಂದು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಹಾಜರಾಗಿದ್ದಾರೆ.ಆ ಬಳಿಕ ಶಾಲಾ ಸಿಬ್ಬಂದಿ ಆ ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯುವಂತೆ ಮನವೊಲಿಸಿದ್ದಾರೆ.
ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪರೀಕ್ಷಾ ಮೇಲ್ವಿಚಾರಕಿ ಕೂಡ ಪರೀಕ್ಷಾ ಕೊಠಡಿ ಒಳಗೆ ಹಿಜಾಬ್ ಧರಿಸಿ ಬಂದಿರುವ ಘಟನೆ ನಡೆದಿದೆ. ರಾಜಾಜಿನಗರದ ಕೆಟಿಎಸ್ವಿ ಹೈಸ್ಕೂಲ್ ಶಿಕ್ಷಕಿ ನೂರ್ ಫಾತಿಮಾ ಹಿಜಾಬ್ ಧರಿಸಿ ಬಂದಿದ್ದರು. ಈ ಪರಿಣಾಮ ಮೇಲ್ವಿಚಾರಕಿ ಸ್ಥಾನದಿಂದ ನೂರ್ ಫಾತಿಮಾ ಅವರನ್ನ ಅಮಾನತು ಮಾಡಲಾಗಿದ್ದು, ಆಕೆಯ ಸ್ಥಾನಕ್ಕೆ ಮತ್ತೊಬ್ಬರನ್ನ ನೇಮಕ ಮಾಡಲಾಗಿದೆ.