ಚೆನ್ನೈ: ಸದ್ಯ ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್ ವಿವಾದ ಪ್ರಕರಣ ದೇಶದೆಲ್ಲೆಡೆ ಸದ್ದು ಮಾಡ್ತಾ ಇದೆ. ಇದೇ ವಿಚಾರವಾಗಿ ಇದೀಗ ಮದ್ರಾಸ್ ಹೈಕೋರ್ಟ್ ಪ್ರಶ್ನೆ ಮಾಡಿದ್ದು, ರಾಷ್ಟ್ರ ಮುಖ್ಯವೋ ಅಥವಾ ಧರ್ಮ ಮುಖ್ಯವೋ ಎಂದು ಪ್ರಶ್ನಿಸಿದೆ.
ಈ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಇಂದು ಮದ್ರಾಸ್ ಹೈಕೋರ್ಟ್ ನಡೆಸಿದೆ. ಇದು ನಿಜಕ್ಕೂ ಅಚ್ಚರಿಯಾದಂತದ್ದು. ಕೆಲವರು ಹಿಜಾಬ್ ಗಾಗಿ ಹೋರಾಟ ಮಾಡುತ್ತಾರೆ, ಇನ್ನು ಕೆಲವರು ಟೋಪಿಗಾಗಿ ಹೋರಾಟ ನಡೆಸುತ್ತಾರೆ. ಇನ್ನು ಕೆಲವರು ತಮಗೆ ಏನು ಬೇಕು ಆ ಬಗ್ಗೆ ಹೋರಾಟ ನಡೆಸುತ್ತಾರೆ.
ಇದು ಒಂದು ರಾಷ್ಟ್ರವೋ ಅಥವಾ ಧರ್ಮದಿಂದ ವಿಭಜನೆಯಾಗಿದೆಯೋ..? ಪಸ್ತುತ ವಿದ್ಯಾಮಾನಗಳನ್ನ ನೋಡಿದ್ರೆಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಭಾರತ ಜಾತ್ಯಾತೀತ ರಾಷ್ಟ್ರ ಎಂದು ನ್ಯಾಯಮೂರ್ತಿ ಖಾರವಾಗಿ ಉತ್ತರಿಸಿದ್ದಾರೆ.
ಇನ್ನು ಅರ್ಜಿದಾರರು ದೇವಸ್ಥಾನಗಳಿಗೆ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಕೋರಿ, ದೇವಸ್ಥಾನಗಳಿಗೆ ಹಿಂದೂಯೇತರರು ಕಾಲಿಡದಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಅರ್ಜಿದಾರನಿಗೆ ಧರ್ಮ ಮತ್ತು ರಾಷ್ಟ್ರ ಪ್ರಾಮುಖ್ಯತೆ ಬಗ್ಗೆ ಪ್ರಶ್ನಿಸಿದೆ.