ಲಕ್ನೋ: ಕರ್ನಾಟಕ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದು, ನಾವೂ ಮುಸ್ಲಿಂ ಹೆಣ್ಣು ಮಕ್ಕಳ ಪರ ಎಂದಿದ್ದಾರೆ.
ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣು ಮಕ್ಕಳ ಬಗ್ಗೆ ಗೌರವವಿದೆ. ವಿಪಕ್ಷ ನಾಯಕರು ಜನರ ದಿಕ್ಕನ್ನು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಬಿಜೆಪಿಯವರು ಬೆಂಬಲಿಸ್ತಾ ಇರೋದು ವಿಪಕ್ಷಗಳಿಗೆ ಸಹಿಸಲು ಸಾಧ್ಯವಾಗ್ತಿಲ್ಲ.
ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಮೇಲೆ ವಿಶ್ವಾಸ ಹೆಚ್ಚಾಗಿದೆ. ಯಾಕಂದ್ರೆ ತ್ರಿವಳಿ ತಲಾಖ್ ಶಿಕ್ಷೆಯಿಂದ ಮುಕ್ತಗೊಳಿಸಿದ್ದೇವೆ. ವಿಪಕ್ಷಗಳಿಗೆ ವೋಟ್ ತಪ್ಪಿ ಹೋಗಬಹುದು ಎಂಬ ಭಯ ಶುರುವಾಗಿದೆ ಅದಕ್ಕೆ ಈ ರೀತಿ ಎಲ್ಲಾ ಮಾತಾಡ್ತಾರೆ. ಆದ್ರೆ ಬಿಜೆಪಿ ಯಾವತ್ತಿಗೂ ಮುಸ್ಲಿಂ ಮಹಿಳೆಯರ ಪರವೇ ಇದೆ ಎಂದಿದ್ದಾರೆ.