ಮಂಗಳೂರು: ಕಳೆದ ವರ್ಷ ಕುಂದಾಪುರದಲ್ಲಿ ಶುರುವಾಗಿದ್ದ ಹಿಜಾಬ್ ಗಲಾಟೆ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಬಳಿಕ ಪರೀಕ್ಷೆ, ರಿಸಲ್ಟ್ ಅಂತ ತಣ್ಣಗಾಗಿದ್ದ ಹಿಜಾಬ್ ಕಿತ್ತಾಟ, ಇತ್ತೀಚೆಗೆ ಮಂಗಳೂರಿನ ಉಪ್ಪಿನಂಗಡಿ ಪದವಿ ಕಾಲೇಜಿನಲ್ಲಿ ಶುರುವಾಗಿತ್ತು. ಸದ್ಯ ಅಮಾನತಿನ ಬಳಿಕ ವಿದ್ಯಾರ್ಥಿನಿಯರು ಬದಲಾಗಿದ್ದಾರೆ.
ಒಟ್ಟು 46 ವಿದ್ಯಾರ್ಥಿನಿಯರು ಕೂಡ ಹಿಜಾಬ್ ಬಿಟ್ಟು ತರಗತಿಗೆ ಹಾಜರಾಗಿದ್ದಾರೆ. ಅದರ ಜೊತೆಗೆ ಇತ್ತಿಚೆಗೆ ಅಮಾನತಾಗಿದ್ದ ಆರು ವಿದ್ಯಾರ್ಥಿನಿಯರು ಕೂಡ ಹಿಜಾಬ್ ಕಳಚಿ ಕ್ಲಾಸ್ ಗೆ ಹಾಜರಾಗಿದ್ದಾರೆ. 24 ವಿದ್ಯಾರ್ಥಿನಿಯರು ಹಿಜಾಬ್ ವಿಚಾರಕ್ಕೆ ಒಂದು ವಾರ ತರಗತಿಯಿಂದ ಬಹಿಷ್ಕಾರಕ್ಕೊಳಗಾಗಿದ್ರು. ಇದೀಗ ಅವಧಿ ಮುಗಿದ ಬಳಿಕ ಅವರು ಹಾಜರಾಗುವ ಸಾಧ್ಯತೆ ಇದೆ.
ಕಳೆದ ಎರಡು ವಾರದಿಂದ ಉಪ್ಪಿನಂಗಡಿ ಹಿಜಾಬ್ ಕುರಿತ ಕೇಂದ್ರ ಬಿಂದುವಾಗಿತ್ತು. ಹೈಕೋರ್ಟ್ ಸೂಚನೆ ನೀಡಿರುವಂತೆಯೇ ಕಾಲೇಜಿನ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದಾರೆ. ಶಾಲಾ ಕಾಲೇಜಿಗೆ ಸಮವಸ್ತ್ರ ಮಾತ್ರ ಧರಿಸಿ ಬರಬೇಕೆಂದು. ಈ ಸಂಬಂಧ ಉಪ್ಪಿನಂಗಡಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಪಟ್ಟು ಹಿಡಿದಿದ್ದರು. ಇದೀಗ ವಿದ್ಯಾರ್ಥಿನಿಯರು ಮನಸ್ಸು ಬದಲಾಯಿಸಿ, ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ.